ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ….

ಹಾಸನ : ಎಸ್.ಎಸ್. ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಅದನ್ನು ವಿದ್ಯಾರ್ಥಿ ಗಳು ಒತ್ತಡರಹಿತವಾಗಿ ಎದುರಿಸಿ ಯಶಸ್ಸು ಗಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ಉಪಪ್ರಾಂಶುಪಾಲ ಮಂಜುನಾಥ್ ನೀಡಿದರು.
ನಗರದ ಆರ್. ಸಿ. ರಸ್ತೆಯ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗ ಪ್ರಧಾನ ಶಾಲೆಯಲ್ಲಿ ೨೦೨೪- ೨೫ನೇ ಸಾಲಿನ ಎಸ್.ಎಸ್. ಎಲ್.ಸಿ ವಿದ್ಯಾರ್ಥಿನಿಯರಿಗೆ ಪ್ರವೇಶ ಪತ್ರ ವಿತರಿಸಿ ಮಾತ ನಾಡಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು. ವಿದ್ಯಾರ್ಥಿಗಳು ಭಯರಹಿತವಾಗಿ, ಒತ್ತಡರಹಿತವಾಗಿ ಪರೀಕ್ಷೆ ಬರೆಯಲು ಪೋಷಕರೂ ಸಹಕರಿಸ ಬೇಕು. ಶಿಕ್ಷಕರು ನೀಡಿರುವ ಸಲಹೆಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದರು. ಏತನ್ಮಧ್ಯೆ ಎ ವಿದ್ಯಾರ್ಥಿನಿಯರಿಗೂ ಪರೀಕ್ಷಾ ಪ್ರವೇಶ ಪತ್ರಗಳನ್ನು ವಿತರಿಸಿದರು.
ಹಿರಿಯ ಶಿಕ್ಷಕರಾದ ಹೆಚ್. ಪಿ. ಮಂಜಳಾರವರು ಮಾತನಾಡಿ ಪರೀಕ್ಷೆಯಲ್ಲಿ ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ವಿದ್ಯಾರ್ಥಿಗಳು ಅನುಸರಿಸಲು ಹೇಳಿದರು. ಪ್ರತೀ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಅಗತ್ಯ ಸಲಹೆ ನೀಡಿದರು.
ಶಿಕ್ಷಕ ಕೆ.ಎನ್. ಚಿದಾನಂದ ಅವರು ಮಾತನಾಡಿ, ಯಶಸ್ಸು ಸಾಧಕನ ಸ್ವತ್ತೆ ಹೊರತೂ ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಇಚ್ಚಾಶಕ್ತಿ ಬಹಳ ಮುಖ್ಯವಾಗಿದ್ದು, ಪರೀಕ್ಷೆ eನವನ್ನು ಪರೀಕ್ಷಿಸಲು ಇರುವ ಒಂದು ಅವಕಾಶ. ಭಯವನ್ನು ಬದಿಗಿಟ್ಟು ಪರಿಶ್ರಮದ ಮೂಲಕ ಆತ್ಮವಿಶ್ವಾಸದಿಂದ ಮುನ್ನೆಡೆದರೆ ಯಶಸ್ಸು ನಮ್ಮದಾಗುತ್ತದೆ ಎಂದರು.
ಶಿಕ್ಷಕರಾದ ಎ.ವಿ.ಗೀತಾರಾಣಿ, ರುದ್ರೇಶ್, ಎಂ.ಆರ್. ರಂಗಾ ಮಣಿ, ಎಸ್. ಕೆ. ಪೂರ್ಣಿಮಾ, ಪಿ. ಮಧು, ಚಿದಾನಂದ, ಕೇಶವ ಮೂರ್ತಿ, ತೈಬಾ ಕೌಸರ್ ಮತ್ತು ಶಾಲಾ ಸಿಬ್ಬಂದಿ ವರ್ಗವು ಎ ವಿದ್ಯಾರ್ಥಿನಿಯರಿಗೂ ಶುಭಕೋರಿದರು. ಶಿಕ್ಷಕರಾದ ಸತ್ಯನಾರಾಯಣ ಮುರಳಿಯವರು ಕಾರ್ಯಕ್ರಮವನ್ನು ನಿರೂಪಿಸಿರು.

Leave a Reply

Your email address will not be published. Required fields are marked *