ಇಂದಿನ ಕಾಲದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಇಂದು ಧಾರಾವಾಹಿ ನೋಡದ ಮಹಿಳೆಯರಿಲ್ಲ ಎಂದರೆ ತಪ್ಪಾಗಲಾರದು. ಅದರಲ್ಲು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಧಾರಾವಾಹಿ ನೋಡುತ್ತಿರುವವರ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಹೊಲ ತೋಟಗಳಲ್ಲಿ ದುಡಿದು ಸಂಜೆ ೬ ಗಂಟೆಯ ನಂತರ ಧಾರಾವಾಹಿ ನೋಡುವುದರ ಮುಖಾಂತರ ತಮ್ಮ ಆಯಾಸವನ್ನೆಲ್ಲ ಕಡಿಮೆ ಮಾಡಿಕೊಳ್ಳು ತ್ತಾರೆ ಮತ್ತು ತಾವು ನೋಡಿದ ಧಾರಾವಾಹಿಗಳನ್ನು ಅಕ್ಕಪಕ್ಕದ ಜನರಿಗೆ ನಿನ್ನೆ ಭಾಗ್ಯ ಧಾರವಾಹಿ ನೋಡಿದಿಯಾ ಎಂದು ಹೇಳುತ್ತಾ ಆ ಧಾರವಾಹಿಗಳಲ್ಲಿ ಬರುವ ಪಾತ್ರವನ್ನು ಹೊಗಳುವಂತಹ ಅಥವಾ ತೇಗಳುವಂತಹ ಸಂವಹನ ಗಳನ್ನು ನಡೆಸುವುದು ಸಾಮಾನ್ಯವಾಗಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೆಲಸ ಮಾಡುತ್ತಾರೆ. ಅವರಿಗೆ ಧಾರಾವಾಹಿ ಗಳನ್ನು ವೀಕ್ಷಿಸಲು ಕಡಿಮೆ ಸಮಯ ಸಿಗಬಹುದು ಮತ್ತು ಅವರು ತಮ್ಮ ವಿರಾಮದ ಸಮಯವನ್ನು ಇತರ ಚಟುವಟಿಕೆಗಳಿಗೆ ಮೀಸಲಿಡಲು ಬಯಸುತ್ತಾರೆ. ಆದರೂ ಕೆಲಸದಿಂದ ಬಂದ ನಂತರ ಅಥವಾ ವಾರಾಂತ್ಯದಲ್ಲಿ ಧಾರಾವಾಹಿಗಳನ್ನು ನೋಡುವ ಮಹಿಳೆಯರನ್ನು ಸಹ ಕಾಣಬಹುದಾಗಿದೆ.
ನಗರ ಪ್ರದೇಶದ ಮಹಿಳೆಯರು ಧಾರಾವಾಹಿಗಳನ್ನು ನೋಡುತ್ತಾರೆ. ಆದರೆ ಅವರ ಪಾತ್ರ ಮತ್ತು ವೀಕ್ಷಣೆಯ ಪ್ರಮಾಣವು ಅವರ ಜೀವನಶೈಲಿ, ಕೆಲಸದ ಸ್ವರೂಪ ಮತ್ತು ಲಭ್ಯವಿರುವ ಇತರ ಮನೋರಂಜನೆ ಆಯ್ಕೆಗಳ ಮೇಲೆ ಅವಲಂಬಿತರಾಗಿರುಥತ್ತಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಧಾರಾವಾಹಿ ವೀಕ್ಷಣೆಯ ಪ್ರಾಮುಖ್ಯತೆ ಸ್ವಲ್ಪ ಕಡಿಮೆ ಇರಬಹುದು ಆದರೆ ಅದು ಇನ್ನೂ ಮಹಿಳೆಯರ ಜೀವನದ ಒಂದು ಭಾಗವಾಗಿದೆ.
ಇಂದು ಕರ್ನಾಟಕದಲ್ಲಿ ಹಲವಾರು ಧಾರವಾಹಿಗಳನ್ನು ನಾವು ನೋಡಬಹುದು. ಅದರಲ್ಲಿ ಭಾಗ್ಯಲಕ್ಷ್ಮಿ ಎಂಬ ಧಾರಾವಾಹಿಯನ್ನು ಸ್ಪೂರ್ತಿ ಯಾಗಿ ತೆಗೆದುಕೊಂಡು ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ಗಂಗಮ್ಮ ಎಂಬ ಮಹಿಳೆ ತಮ್ಮ ಮಗನೊಂದಿಗೆ ಬರೆದಿzರೆ. ಇದು ಈ ಧಾರಾವಾಹಿಯಿಂದ ಆಗುತ್ತಿರುವ ‘ಪಾಸಿಟಿವ್ ಇಂಪ್ಯಾಕ್ಟ್’ ಇಂದಿನ ಜಗತ್ತಿನಲ್ಲಿ ಧಾರಾವಾಹಿ ಎಂದರೆ ಮನೆಹಾಳು ಮಾಡುವ ಧಾರಾವಾಹಿ ಎಂದು ಮೂಗು ಮುರಿಯುವ ಮುನ್ನ ಇಂತಹ ದಾರವಾಹಿಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವುದು ಉತ್ತಮ.
ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಗೃಹಿಣಿಯರಾಗಿದ್ದು ಅವರಿಗೆ ಟಿವಿ ವೀಕ್ಷಿಸಲು ಹೆಚ್ಚು ಸಮಯಾವಕಾಶವಿರುತ್ತದೆ. ಹೀಗಾಗಿ ಮಧ್ಯಾಹ್ನ ಮತ್ತು ಸಂಜೆ ಪ್ರೈಮ್ ಟೈಮ್ ಧಾರಾವಾಹಿಗಳ ವೀಕ್ಷಕರಲ್ಲಿ ಇವರ ಸಂಖ್ಯೆ ಹೆಚ್ಚಿರುತ್ತದೆ. ವಾರದ ದಿನಗಳಲ್ಲಿ ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಮಹಿಳೆಯರು ಸುಮಾರು ಶೇ.೬೨ ವೀಕ್ಷಕರನ್ನು ಒಳಗೊಂಡಿರುತ್ತದೆ ಎಂದು ಸಮೀಕ್ಷೆ ತಿಳಿಸುತ್ತದೆ.
ಸಂಜೆ ೭ರ ಸುಮಾರಿಗೆ ಪುರುಷರು ಟಿವಿ ರಿಮೋಟ್ ಅನ್ನು ನಿಯಂತ್ರಣವನ್ನು ತೆಗೆದುಕೊಳ್ಳುವುದ ರಿಂದ ಪ್ರೈಮ್ ಟೈಮ್‌ನಲ್ಲಿ ಮಹಿಳಾ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ ಮಹಿಳೆಯರು ಧಾರಾವಾಹಿಯಲ್ಲಿ ಬರುವ ಕೆಲವು ಪಾತ್ರಗಳನ್ನು ಅನುಸರಿಸುತ್ತಾ ಅವರ ಫ್ಯಾಷನ್ ಮತ್ತು ಟ್ರೆಂಡ್‌ಗಳನ್ನು ತಾವು ಅನುಸರಿಸುತ್ತಾರೆ.
ಒಟ್ಟಾರೆಯಾಗಿ ಕರ್ನಾಟಕದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಧಾರವಾಹಿಗಳನ್ನು ನೋಡುವುದು ಮಹಿಳೆಯರ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಮನರಂಜನೆ, ಸಂವಹನ ಮತ್ತು ಸಾಮಾಜಿಕ ಸಂಪರ್ಕವನ್ನು ಒದಗಿಸುತ್ತದೆ. ಆದರೆ ಅವರ ಆಲೋಚನೆಗಳು ಮತ್ತು ಜೀವನಶೈಲಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಇವೆ.
ಧಾರವಾಹಿ ಎನ್ನುವುದು ಕೆಲವರಿಗೆ ಮನರಂಜನಾಯಾದರೆ ಮತ್ತು ಕೆಲವರಿಗೆ ಅದು ಸ್ಪೂರ್ತಿಯಾಗಿ ಜೀವನದಲ್ಲಿ ಎನಾದರು ಸಾಧಿಸುವ ಹಂಬಲವನ್ನು ಹೆಚ್ಚಿಸುತ್ತದೆ , ಧಾರವಾಹಿಗಳು ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆ ಉಂಟು ಮಾಡಿದರೆ ಅದರ ವೀಕ್ಷಣೆ ಸಾರ್ಥಕವಾಗುತ್ತದೆ.
ಸುಮ ರಮೇಶ್ ಗೌಡ.
ಪತ್ರಿಕೋಧ್ಯಮ ವಿದ್ಯಾರ್ಥಿ , ಕುವೆಂಪು ವಿವಿ
ಮಹಿಳೆಯರ ಚಿತ್ತ ಧಾರವಾಹಿಗಳತ್ತ…!
