ಶಿಕಾರಿಪುರ : ಉನ್ನತ ವಿದ್ಯೆಯ ಜತೆಗೆ ವಿನಯ ಸಂಸ್ಕಾರವನ್ನು ಅಳವಡಿಸಿಕೊಂಡ ಮಹಿಳೆಯರು ದೇಶ ಮತ್ತು ರಾಜ್ಯದ ಚುಕ್ಕಾಣಿ ಹಿಡಿದು ಕುಟುಂಬದ ಜತೆಗೆ ದೇಶದ ಪ್ರಗತಿಗೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿzರೆ. ಮಹಿಳೆಯರ ಆದರ್ಶ ಗುಣದಿಂದಾಗಿ ಮಾತ್ರ ಸಮಾಜ ಸದಡವಾಗಲು ಸಾದ್ಯ ಎಂದು ಇಲ್ಲಿನ ಪುರಸಭೆಯ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ತಿಳಿಸಿದರು .
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಕೃತಿ ಚಿಕಿತ್ಸಾಲಯ ಹಾಗೂ ಐಶ್ವರ್ಯ ಹೋಮಿಯೂ ಫಾರ್ಮಸಿ ಸೃಷ್ಟಿ ಟ್ರಸ್ಟ್ ಪಂಚಮಸಾಲಿ ಸಮಾಜ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಹಾಗೂ ೭೨ನೇ ಉಚಿತ ಮಂಡಿ ನೋವಿನ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು .

ಸಮಾಜದ ಸದೃಡತೆಗೆ ಮಹಿಳೆಯರ ತ್ಯಾಗಮಯ ಬದುಕು ಬಹು ಮುಖ್ಯ ಕಾರಣವಾಗಿದ್ದು, ಸಮಾಜದಲ್ಲಿನ ಪ್ರತಿಯೊಬ್ಬ ಮಹಿಳೆ ಸುಶಿಕ್ಷಿತ ರಾದಲ್ಲಿ ಸಮಾಜ ಸಧೃಡವಾಗು ವುದು ನಿಶ್ಚಿತ ಎಂದ ಅವರು ಇತ್ತೀಚಿನ ವರ್ಷದಲ್ಲಿ ಮಹಿಳೆ ಪುರುಷನಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದು ಉನ್ನತ ವಿದ್ಯೆ ಜತೆಗೆ ವಿನಯ ಸಂಸ್ಕಾರ ಅಳವಡಿಸಿ ಕೊಂಡ ಹಲವು ಮಹಿಳೆಯರು ದೇಶ ರಾಜ್ಯದ ಚುಕ್ಕಾಣಿ ಹಿಡಿದು ದೇಶದ ಪ್ರಗತಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿzರೆ ಎಂದು ತಿಳಿಸಿದರು.
ಮುಖ್ಯ ಅತಿಥಿ ನ್ಯಾಯವಾದಿ ಜ್ಯೋತಿಗೌಡ ಮಾತನಾಡಿ, ಹುಟ್ಟಿನಿಂದ ಸಾಯುವವರೆಗೂ ಮಹಿಳೆಯರಿಗೆ ಸರ್ಕಾರವು ಅನೇಕ ಕಾನೂನುಗಳನ್ನು ಜರಿಗೊಳಿಸಿದ್ದು ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನುಗಳು ನೆರವಾಗುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಕೃತಿ ಚಿಕಿತ್ಸಾಲಯದ ಡಾ.ನಾಗವೀಣಾ ಎಂ ಪಾಟೀಲ್ ಮಾತನಾಡಿ, ಆಹಾರ ಆರೋಗ್ಯ ಆಧ್ಯಾತ್ಮವನ್ನು ಮಹಿಳೆಯರು ಅಡುಗೆ ಮನೆಯಿಂದಲೇ ಪ್ರಾರಂಭಿಸಿದಲ್ಲಿ ರೋಗಮುಕ್ತ ಸಂಪೂರ್ಣ ಜೀವನಕ್ಕೆ ಸಹಕಾರಿ ಆಗುತ್ತದೆ ಎಂದರು.
ಸಮಾಜಿಕ ಕಾರ್ಯಕರ್ತೆ ಶಾಂತಮ್ಮ ಸುರಗಿಹಳ್ಳಿ,ಡಾ ವಿಜಯ ಲಕ್ಷ್ಮಿ ನಾಡಿಗ್, ಭರತನಾಟ್ಯ ಕಲಾವಿದೆ ಸುಷ್ಮಾ ದೀಕ್ಷಿತ್ ಡಾ.ಅಶ್ವಿನಿ ಫಿಜಿಯೋಥೆರಪಿಸ್ಟ್, ನ್ಯಾಯವಾದಿ ಜ್ಯೋತಿಗೌಡ, ಪುರಸಭಾಧ್ಯಕ್ಷೆ ಶೈಲಜ ಯೋಗೀಶ ಮಡ್ಡಿ ಸಹಿತ ಸಾಧಕ ಮಹಿಳೆ ಯರನ್ನು ಗೌರವಿಸಲಾಯಿತು .

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಂ ಸಿ ಆನಂದ್, ಶಿವರಾಜ ಬಗನಕಟ್ಟೆ, ಡಾ. ಮಹೇಂದ್ರ, ಕೃಷ್ಣಮೂರ್ತಿ, ಲತಾ, ಧನ್ಯಮಯಿ, ದಕ್ಷಿತ್, ಮಮತಾ, ನೀಲಮ್ಮ ಬಗನಕಟ್ಟೆ, ಪ್ರಭುಸ್ವಾಮಿ ಸಾಲೂರು, ಸಮಾಜಸೇವಕ ಆರ್ ಜಯಣ್ಣ,ಭಾರತಿ ಸಹಿತ ಹಲವು ಮಹಿಳೆಯರು ಭಾಗವಹಿಸಿದ್ದರು.
ಹೋಮಿಯೋಪತಿ ವೈದ್ಯ ಡಾ ಮಾಲತೇಶ ಆರೋಗ್ಯ ಸಲಹೆ ನೀಡಿದರು. ಪ್ರಣತಿ ಅಂಜಿ ಪ್ರಾರ್ಥಿಸಿ, ಪ್ರಾಚಾರ್ಯ ರೇವಣ ಸಿದ್ದೇಶ್ವರ ಸ್ವಾಗತಿಸಿ, ಡಾ. ಮಾಲತೇಶ ನಿರೂಪಿಸಿ ಶಿಕ್ಷಕಿ ಅನುಷಾ ಮಹೇಂದ್ರ ವಂದಿಸಿದರು.