ಶಿವಮೊಗ್ಗ : ಪ್ರಜಪ್ರಭುತ್ವದ ಅದ್ಭುತ ಪರಿಕಲ್ಪನೆ ನೀಡಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ನಿವೃತ್ತ ಉಪ ನ್ಯಾಸಕಿ ಮಂಜುಳಾ ಹೇಳಿದರು.
ನಗರದ ವೃತ್ತಿಪರ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಎಚ್.ಎಂ. ಮಲ್ಲಿಕಾರ್ಜುನಪ್ಪ ದತ್ತಿ ಆಶಯ ದಂತೆ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅನುಭವ ಮಂಟಪದಂತಹ ವ್ಯವಸ್ಥೆಯ ಒಳಗೆ ಪ್ರಜಪ್ರಭುತ್ವದ ಆಶಯ, ಸಮಾನತೆಯನ್ನು ಕಾಣಬಹುದು. ನುಡಿದಂತೆ ನಡೆದು ಜೀವನದ ಆದರ್ಶಗಳನ್ನು ಸಾಧಿಸಿ ತೋರಿಸಿದವರು ಶರಣರು ಎಂದು ತಿಳಿಸಿದರು.
ಗುತ್ತಿ ಎಡೆಹಳ್ಳಿ ಸೂರಪ್ಪ ಗೌಡರ ದತ್ತಿಯ ಆಶಯದಂತೆ ಡಿ.ವಿ. ಗುಂಡಪ್ಪನವರ ಸಾಹಿತ್ಯ ವಿಚಾರವಾಗಿ ಕುವೆಂಪು ವಿವಿ ಸಹ ಪ್ರಾಧ್ಯಾಪಕಿ ಹಸೀನಾ ಎಚ್.ಕೆ. ಅವರು ಮಾತನಾಡಿ, ಡಿ.ವಿ.ಜಿ ಅವರ ಸಾಹಿತ್ಯ ಯಾಕೆ ಪ್ರಸ್ತುತ ದಿನಮಾನದಲ್ಲಿ ಸೂಕ್ತ ಎನ್ನುವುದಾದರೆ, ಮನುಕುಲಕ್ಕೆ ಹೊಸ ಆವಿಷ್ಕಾರ ಹಾಗೂ ಬದುಕಿನ ಸತ್ಯಾನ್ವೇಷಣೆಗೆ ಮಲ್ಯಯುತ ಭಾವನಾತ್ಮಕ ಸಂಬಂಧವನ್ನು ಕಗ್ಗದ ಮೂಲಕ ತೋರಿಸಿಕೊಟ್ಟಿದೆ ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಮಾತನಾಡಿ, ದತ್ತಿ ಉಪನ್ಯಾಸಗಳನ್ನು ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಸಂಘಟಿ ಸುವ ಮೂಲಕ ಯುವ ಮನಸ್ಸು ಗಳಲ್ಲಿ ವಚನಕಾರರ ಆಶಯ, ನುಡಿದಂತೆ ನಡೆಯುವ ಮಾರ್ಗ ವನ್ನು ಅನುಸರಿಸಿದ ವಚನಕಾರರ ಜೀವನ ಮಲ್ಯ ಗಳನ್ನು ಹಾಗೂ ಮಂಕುತಿಮ್ಮನ ಕಗ್ಗದ ಸಾರಂಶಗಳನ್ನು ಪರಿಚಯಿ ಸಲು ಸಾಧ್ಯ ಮಾಡಿಕೊಡಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ವಿನಯ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ನಳಿನಾಕ್ಷಿ ವಚನ ಗಾಯನ ಮತ್ತು ಕಗ್ಗ ವಾಚಿಸಿದರು ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ರಾಮಪ್ಪ ಗೌಡ, ತಾಲ್ಲೂಕು ಕಸಾಪ ಕಾರ್ಯದರ್ಶಿ ಅನುರಾಧ, ನಾರಾಯಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರೀತಿ ನಿರೂಪಿಸಿ, ಸ್ಮಿತ ವಂದಿಸಿದರು.
ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ವಚನ ಸಾಹಿತ್ಯ: ಮಂಜುಳಾ
