ಗದಗ : ಗದಗ ತಾಲೂಕಿನ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಿಮ್ಮಾ ಪೂರ ಗ್ರಾಮಕ್ಕೆ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಎಂದು ಆಯ್ಕೆಯಾಗಿದ್ದು, ಆರೋಗ್ಯ ಇಲಾಖೆಯ ಎ ನೌಕರರು, ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಹಕಾರದಿಂದಾಗಿ ಈ ಪ್ರಶಸ್ತಿ ಬಂದಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅಮೃತ ಹರಿದಾಸ ಹೇಳಿದರು
ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯಲ್ಲಿ ಏರ್ಪ ಡಿಸಿದ್ದ ಕ್ಷಯರೋಗ ಮುಕ್ತ ಗ್ರಾಮ ಮತ್ತು ಆಶಾ ಕಾರ್ಯರ್ತೆಯರ ಮಾಸಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿ ಮಾತನಾಡಿ, ಪ್ರಶಸ್ತಿಯನ್ನು ಸ್ವೀಕರಿಸಿದ ನಾವು ಮುಂದಿನ ದಿನಮಾನಗಳಲ್ಲಿ ನಾವು ಪ್ರಾಥಮಿಕ ಆರೋಗ್ಯ ಕೇಂದ್ರದ ಇತರ ಉಪಕೇಂದ್ರದ ಗ್ರಾಮಗಳನ್ನು ಕ್ಷಯ ರೋಗ ಮುಕ್ತಗ್ರಾಮನ್ನಾಗಿಸುವಲ್ಲಿ ನಾವೆಲ್ಲರೂ ಸಾಮೂಹಿಕವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಶಿದ್ದಪ್ಪ ಎನ್. ಲಿಂಗದಾಳ ಮಾತ ನಾಡಿ, ಪ್ರತಿಯೊಂದು ಗ್ರಾಮದಲ್ಲಿ ಕ್ಷಯರೋಗದ ಬಗ್ಗೆ ಜನರಲ್ಲಿ ಅರಿವು ಮತ್ತು ಜಗೃತಿ ಮೂಡಿಸಿ ಕ್ಷಯರೋಗ ಮುಕ್ತಗೊಳಿಸಲು ಪಂಚಾಯತಿ ಮತ್ತು ಸಾರ್ವ ಜನಿಕರ ಸಹಕಾರ ಪಡೆದು ನಾವು ಶ್ರಮವಹಿಸೋಣ ಎಂದರು.
ಈ ಸಂದರ್ಭದಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿದ ಆಶಾ ಕಾರ್ಯಕರ್ತೆ ಗಾಯತ್ರಿ ಬಡಿಗೇರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ಎನ್ ಕಡೇಮನಿ. ಹುಲಿಗೆಮ್ಮ ಮಾದರ. ನಿಕಿತಾ ಮೈತ್ರಿ. ಗಂಗಮ್ಮ ಕುಂಬಾರ. ಮುತ್ತಪ್ಪ ಹಟ್ಟಿಮನಿ ಎಸ್ ಬಿ, ಗಡಾದ ಎಸ್ ಬಿ, ಕವಳಿಕಾಯಿ ಚಂದ್ರಕಲಾ, ತೋಟದ ಜಯಶ್ರೀ ಡಬಾಲಿ, ಲಕ್ಷ್ಮಿ ಭಜಂತ್ರಿ, ಶಶಿಕಲಾ ಹಡಪದ, ಮಾಲಾ ಮೇವುಂಡಿ, ಪೂಜರ. ಶೋಭಾ, ಮನೆನ್ನವರ ಲಲಿತಾ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಡಾ.ಅಮೃತ ಹರಿದಾಸ ಅವರಿಗೆ ಸನ್ಮಾನ
