ಶಾಸಕರ ಪುತ್ರ ಬಸವೇಶ್ ಬಂಧನಕ್ಕೆ ಕಲಬುರಗಿಯ ಈಡಿಗ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹ

ಶಿವಮೊಗ್ಗ : ಗಣಿ ಮತ್ತು ಭೂ ವಿeನ ಇಲಾಖೆಯ ಅಧಿಕಾರಿ ಜ್ಯೋತಿ ಜನಾರ್ಧನ್ ಅವರು ಕರ್ತವ್ಯ ನಿರತರಾಗಿ zಗ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದನ್ನು ಈಡಿಗ ಬಿಲ್ಲವ ನಾಮದಾರಿ ಸಮಾಜ ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಕಲಬುರಗಿಯ ಈಡಿಗ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ನಮ್ಮ ಸಮಾಜ ನೈತಿಕ ಸ್ಥೈರ್ಯ ತುಂಬಬೇಕಾಗಿದೆ. ಅವರ ಮನೆಗೆ ತೆರಳಿ ಒಂದು ಗಂಟೆ ಕಾಲ ಮಾತನಾಡಿ ಧೈರ್ಯ ತುಂಬಿzವೆ. ಹಿಂದುಳಿದ ವರ್ಗದ ಪರವಾಗಿzವೆ ಎನ್ನುವ ಕಾಂಗ್ರೆಸ್ ಸರ್ಕಾರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಪಮಾನ ಆದಾಗ ಆರೋಪಿಗಳನ್ನು ಬಂಧಿಸಲು ತೋರಿಸಿದಿ ಆಸಕ್ತಿಯುನ್ನು ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದರು.
ದೂರಿನಲ್ಲೂ ಕೂಡ ಎಂಎಲ್‌ಎ ಮಗನ ಹೆಸರಿಲ್ಲ. ಇನ್ನೂ ಅವನನ್ನು ಬಂಧಿಸಿಲ್ಲ. ಮಹಿಳಾ ಅಧಿಕಾರಿಗಳಿಗೆ ಈ ಸರ್ಕಾರ ದಲ್ಲಿ ರಕ್ಷಣೆ ಇಲ್ಲ. ಅವರು ಭಯಭೀತ ರಾಗಿzರೆ. ಕೂಡಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಶಾಸಕರ ಪುತ್ರನನ್ನು ಬಂಧಿಸಬೇಕು. ಶಾಸಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಭದ್ರಾವತಿ ಭಾರತದ ಒಂದು ಭಾಗವಾಗಿದೆ. ಅದು ಕೂಡ ಸಂವಿಧಾನಕ್ಕೆ ಒಳಪಟ್ಟಿದೆ. ಆದರೂ ಕೂಡ ಮಹಿಳೆಯರಿಗೆ ನಿಂದನೆ ಮಾಡಿದ ವ್ಯಕ್ತಿಯ ಬಂಧನವಾಗಿಲ್ಲ. ಪೊಲೀಸರು ಸೊಮೊಟೋ ಕೇಸ್ ದಾಖಲಿಸಿ ಬಂಧಿಸಬೇಕಾಗಿತ್ತು. ಈಡಿಗ ಸಮಾಜ ಸ್ವಾಭಿಮಾನಿ ಸಮಾಜವಾಗಿದೆ. ಹಿಂದಿನ ಸರ್ಕಾರ ನಿಗಮ ಘೋಷಣೆ ಮಾಡಿದ್ದರೂ ಈಡಿಗ ನಿಗಮಕ್ಕೆ ಈ ಸರ್ಕಾರ ಒಂದು ರೂ. ಕೂಡ ನೀಡಿಲ್ಲ. ಈಡಿಗ ಅಧಿಕಾರಿಗಳನ್ನು ದಮನಿಸುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹಿಳಾ ಅಧಿಕಾರಿಗೆ ಬೆದರಿಕೆ ಅಥವಾ ಕಿರಿ ಕಿರಿ ಸರ್ಕಾರ ಅಥವಾ ಹಿರಿಯ ಅಧಿಕಾರಿ ಗಳು ಮಾಡಿದ್ದಲ್ಲಿ ಈಡಿಗ ಸಮಾಜ ಸುಮ್ಮನಿರುವುದಿಲ್ಲ. ತಕ್ಕ ಪಾಠ ಕಲಿಸುತ್ತೇವೆ ಎಂದರು.
ಶಾಸಕ ಸಂಗಮೇಶ್ ಅವರ ಪುತ್ರನನ್ನು ಕೂಡಲೇ ಬಂಧಿಸಿದ್ದರೆ ಭದ್ರಾವತಿ ಚಲೋ ಅಭಿಯಾನ ಹಮ್ಮಿಕೊಳ್ಳುತ್ತೇವೆ. ಈಡಿಗ ಸಮಾಜ ಅಧಿಕಾರಿಗೆ ನೈತಿಕ ಬೆಂಬಲ ಕೊಡುತ್ತದೆ ಎಂದರು.
ಗ್ಯಾರಂಟಿಗಳಿಗಿಂತ ನಮ್ಮ ಸಮಾಜದ ಹೆಣ್ಣು ಮಕ್ಕಳ ಸ್ವಾಭಿಮಾನ ದೊಡ್ಡದು. ಸರ್ಕಾರದ ವಿಳಂಬ ನೀತಿ ಒಂದೇ ಕಡೆ ಹೋಗುತ್ತಿದೆ. ಆರೋಪಿತನ ತಪ್ಪಿಲ್ಲದಿದ್ದರೆ ಧ್ವನಿ ಮುದ್ರಿತ ಸ್ಯಾಂಪಲ್ ಅನ್ನು ಎಫ್‌ಎಸ್‌ಎಲ್ ಗೆ ಕಳಿಸಿ ತನಿಖೆ ಮಾಡಲಿ. ಕೂಡಲೇ ಸಿಎಂ, ಡಿಸಿಎಂ ಮತ್ತು ಸೋನಿಯಾ ಗಾಂಧಿ ಅವರು ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಈಡಿಗ ಸಮಾಜದ ಮತಗಳು ಬೇಡವೆಂದು ಘೋಷಿಸಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೇವಲ ಎರಡು ಮುಂದು ವರೆದ ವರ್ಗದ ಜನರಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಹಿಂದುಳಿದ ವರ್ಗ ದವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ತಕ್ಕ ಶಾಸ್ತಿ ಅನುಭವಿಸುತ್ತದೆ ಎಂದರು.
ಈಡಿಗ ಸಮುದಾಯದ ಅಧಿಕಾರಿಯ ಮೇಲೆ ಈ ರೀತಿ ದೌರ್ಜನ್ಯ ನಡೆಯುವು ದನ್ನು ಸಹಿಸಲು ಸಾಧ್ಯವಿಲ್ಲ, ಮಹಿಳಾ ಅಧಿಕಾರಿಯನ್ನು ಭೇಟಿ ಮಾಡಿ ಧೈರ್ಯವನ್ನ ತುಂಬಿzವೆ ಎಂದ ಸ್ವಾಮೀಜಿಗಳು, ಜಿಯ ಈಡಿಗ ಸಮುದಾಯದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಮುಖಂಡರು ಬಾಯಿ ಮುಚ್ಚಿಕೊಂಡಿ ರುವುದು ಸರಿಯಲ್ಲ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಘಟನೆ ಕುರಿತು ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೀಡಿರುವ ಪ್ರತಿಕ್ರಿಯೆ ಸಮಂಜಸವಾಗಿಲ್ಲ. ತೃಪ್ತಿ ದಾಯಕವಾಗಿಲ್ಲ ಸಮುದಾಯದ ಸಚಿವರಾಗಿ ಈ ರೀತಿ ಮಾತನಾಡದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಬೇಕು. ಅದೇ ರೀತಿ ಬೇಳೂರು ಗೋಪಾಲಕೃಷ್ಣ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಸೇರಿದಂತೆ ಸಮಾಜದ ಎ ಮುಖಂಡರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವನ್ನ ಮಾಡಬೇಕು ಎಂದರು.
ಬೇರೆ ಸಮುದಾಯದವರು ತಮ್ಮ ಸಮುದಾಯದವರಿಗೆ ಅನ್ಯಾಯವಾದಾಗ ಅವರ ಪರವಾಗಿ ಗಟ್ಟಿಯಾಗಿ ನಿಲ್ಲುವ ಮೂಲಕ ಅನ್ಯಾಯಕ್ಕೊಳಗಾದ ವರಿಗೆ ನೈತಿಕ ಬೆಂಬಲ ನೀಡುತ್ತಾರೆ. ಹಾಗೆಯ೨ ನಮ್ಮ ಸಮಾಜದಲ್ಲಿ ಇಂತಹ ಪ್ರವೃತ್ತಿ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ನಾವು ಕೂಡ ಯುವ ಸಮೂಹಕ್ಕೆ ತರಬೇತಿ ನೀಡುತ್ತೇವೆ ಎಂದು ತಿಳಿಸಿದರು.
ಬಳಿಕ ಅವರು ಜಿ ರಕ್ಷಣಾಧಿಕಾರಿ ಗಳಿಗೂ ಮನವಿ ನೀಡಿ ತಪ್ಪಿತಸ್ಥ ಪ್ರಮುಖ ಆರೋಪಿ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀ ಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ವೆಂಕಟೇಶಮೂರ್ತಿ, ಪುಷ್ಪಲತಾ ಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಪ್ರೀತಾ ಪೂಜರಿ, ಮಂಜುನಾಥ್, ಯೋಗೇಂದ್ರ, ಲಲಿತಾ ಹೊನ್ನಪ್ಪ, ಮಂಜುಳಾ ರಾಘವ, ವಾಸಪ್ಪ ಮಾಸ್ತಿಕಟ್ಟೆ, ಸಚಿನ್ ನಾಯಕ್, ದೇವರಾಜ್ ನಾಯಕ್, ಪ್ರಶಾಂತ್ ನಾಯಕ್, ಮತ್ತಿತರರು ಇದ್ದರು.