ಸೂರ್ವಕಾಲ್ವಿ: ಶ್ರೀ ಆಂಜನೇಯ ಸ್ವಾಮಿಯ ನೂತನ ರಥೋತ್ಸವ…

ಹೂವಿನಹಡಗಲಿ : ತಾಲೂಕಿನ ಪೂರ್ವಕಾಲ್ಡಿಯಲ್ಲಿ ಶ್ರೀ ಆಂಜನೇಯ ಸ್ವಾಮಿಯ ನೂತನ ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು.
ಕಳೆದ ೬೦ ವರ್ಷಗಳಿಂದ ಪ್ರತಿ ವರ್ಷ ಯುಗಾದಿ ಪಾಡ್ಯದಂದು ಉಚ್ಚಯ್ಯ ರಥೋತ್ಸವ ಜರುಗುತ್ತಾ ಬಂದಿದ್ದು. ಈ ವರ್ಷ ಸ್ವಾಮಿಗೆ ನೂತನ ರಥೋತ್ಸವನ್ನು ತಯಾರಿಸಿದ್ದು, ಬೆಳಿಗ್ಗೆಯಿಂದ ಶಾಸ್ರೋಕ್ತವಾಗಿ ವಿಧಿ-ವಿಧಾನಗಳ ಮೂಲಕ ಹೋಮ ಹವನಗಳ ಪೂಜೆ ನೆರವೇರಿಸಲಾಯಿತು.
ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಆಗಮಿಸಿ, ರಥೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು. ಹೋಮ -ಹವನ ಕಾರ್ಯಕ್ರಮದಲ್ಲಿ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮಿನಿ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆಯ ಅಭಿನವ ಚನ್ನಬಸವ ಸ್ವಾಮೀಜಿ ಆಗಮಿಸಿದ್ದರು.
ಗ್ರಾಮದ ಮುಖಂಡರಾದ ಬಿ.ಹನುಮಂತಪ್ಪ, ಬಿ.ಎಂ. ಸೊಲಬಯ್ಯ, ಬಿ.ಕೊಟ್ರಪ್ಪ, ಬಿ.ದೊಡ್ಡಬಸಪ್ಪ, ಕೆ.ವೀರೇಶ್, ಅಂಕಲಿ ಉಮೇಶ್, ಎನ್. ಈಶ್ವರಪ್ಪ, ಹೊಳಗುಂದಿ ಶಿಲ್ಪಿ ವೀರೇಶ್ ಸೇರಿದಂತೆ ಗ್ರಾಮದ ದೈವಸ್ಥರು ಉಪಸ್ಥಿತರಿದ್ದರು.
ಬೆಳಗಿನ ಜವದಲ್ಲಿ ಸಾಮಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆಯೊಂದಿಗೆ ಮಹಾ ಮಂಗಳಾರತಿ ಜರುಗಿತು. ಶ್ರೀಕ್ಷೇತ್ರ ಕಾಗಿನೆಲೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೂತನ ರಥೋತ್ಸವ ಜರುಗುವುದು.

Leave a Reply

Your email address will not be published. Required fields are marked *