ಕರವೇ ಯುವಸೇನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ…

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಜಿಗೆ ಕೆಟ್ಟ ಹೆಸರು ಬರುವಂತಾಗಿದೆ ಹೆಚ್ಚಾಗಿ ದೂರದ ಊರುಗಳಿಂದ ಬರುವ ಪ್ರಯಾಣಿಕರ ವಸ್ತುಗಳು ಕಳ್ಳತನವಾಗುತ್ತಿದ್ದು ಕೆಲವೇ ಪ್ರಕರಣಗಳು ದಾಖಲಾಗುತ್ತಿದೆ ಪ್ರಯಾಣಿಕರು ದೂರದ ಊರು ನವರಾಗಿರುವುದರಿಂದ ಕೇಸ್ ದಾಖಲಿಸಲಾಗುತ್ತಿಲ್ಲ ಅಂಕಿ ಅಂಶದ ಪ್ರಕಾರ ೧೦ ತಿಂಗಳಿನಲ್ಲಿ ಸುಮಾರು ೨೦ ರಷ್ಟು ಕಳ್ಳತನದ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ಕ್ಯಾಮೆರದ ಕೊರತೆಯಿಂದಾಗಿ ಪೊಲೀಸ್ ಇಲಾಖೆಗೂ ಸಹ ಇದು ತಲೆ ನೋವಾಗಿದೆ ತಾವುಗಳು ತಕ್ಷಣ ನಿಲ್ದಾಣದಲ್ಲಿ ಎ ಫ್ಲಾಟ್ ಫಾರಂ ನಲ್ಲೂ ಕಾಣುವಂತೆ ಹಾಗೂ ಬಸ್ ಗಳು ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಸ್ಥಳಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ತಮ್ಮ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಸಾರ್ವಜನಿಕರ ಪರವಾಗಿ ಕೇಳಿಕೊ ಳ್ಳುತ್ತೇವೆ.
ಇನ್ನು ೧೫ ದಿನಗಳಲ್ಲಿ ಈ ವಿಷಯವಾಗಿ ತಾವುಗಳು ಯಾವುದೇ ಕ್ರಮಗಳನ್ನು ತೆಗೆದು ಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನು ಸಹ ನೀಡುತ್ತಿ ದ್ದೇವೆ ಹಾಗೆಯೇ ಜವಾಬ್ದಾರಿ ಸ್ಥಾನದಲ್ಲಿರುವ ತಾವುಗಳು ಕೂಡ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆಂದು ತಿಳಿಸುತ್ತಿದ್ದೇವೆ.
ಈ ಹೋರಾಟದಲ್ಲಿ ಕರವೇ ಯುವಸೇನೆ ಜಿಧ್ಯಕ್ಷ ಕಿರಣ್ ಕುಮಾರ್ ಹೆಚ್‌ಎಸ್ ಜಿ ಉಪಾಧ್ಯಕ್ಷ ಜೈ ಕೃಷ್ಣ ನಗರಾಧ್ಯಕ್ಷ ಪ್ರಪುಲ್ಲ ಚಂದ್ರ ರಾಮು ಜದವ್ ರಾಮಣ್ಣ ಫುಟ್ ಕೋರ್ಟ್ ಜಿ ಸಂಘಟನಾ ಕಾರ್ಯದರ್ಶಿ ವಿಜ ಯಕುಮಾರ್ ಉಪ್ಪಿನ್ ಮುಂತಾ ದವರು ಭಾಗವಹಿಸಿದ್ದರು.