ನ್ಯಾಮತಿ : ನ್ಯಾಮತಿ ತಾಲೂ ಕಿನ ಬಸವನಹಳ್ಳಿ ಗ್ರಾಮಕ್ಕೆ ಸ್ಮಾಶಾನ ಜಗ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಯಲ್ಲಿ ದೊಡ್ಡಪ್ಪ (೬೫) ಮೃತಪಟ್ಟ ವ್ಯಕ್ತಿಯ ಶವ ಇಟ್ಟು ಭಾನುವಾರ ಪ್ರತಿಭಟಿಸಿದರು.
ಸ್ಮಶಾನಕ್ಕೆ ನಿಗಧಿಯಾದ ಜಗಕ್ಕೆ ಅಂತ್ಯ ಸಂಸ್ಕಾರ ಮಡಲು ತೆರಳಿದಾಗ ಅಡ್ಡಿಪಡಿಸಿದ ಹಿನ್ನಲೆ ಗ್ರಾ.ಪಂ,ಕಚೇರಿಯ ಒಳಗೆ ಶವ ಇಟ್ಟು ಪ್ರತಿಭಟಿಸಿ ಶವ ಊಳಲು ಜಗ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು

ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಿ.ಜಿ. ಶಾಂತನಗೌಡ , ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಮತ್ತು ಕಂದಾಯ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ , ಸಿಬ್ಬಂದಿಗಳು ಮೃತರ ಕುಟುಂಬಸ್ಥರ ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಅದರೆ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಸ್ಮಶಾನದ ಜಗ ಗುರುತಿಸುವ ತನಕ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕಾರ್ಯಾಲಯದ ಮುಂದೆ ಇದ್ದ ಮೃತಪಟ್ಟ ದೊಡ್ಡಪ್ಪರ ಶವವನ್ನು ಕಾರ್ಯಾಲಯದ ಒಳಗಡೆ ಇಟ್ಟಿzರೆ.
ಶಾಸಕ ಡಿ.ಜಿ.ಶಾಂತನಗೌಡ ಗ್ರಾ.ಪಂ.ಯ ಕಾರ್ಯಾಲಯದಲ್ಲಿ ಗ್ರಾಮಸ್ಥರಿಂದ ಸ್ಮಶಾನ ಜಗದ ಮಾಹಿತಿಯನ್ನು ಪಡೆದ ಬಳಿಕ ಸಂಬಂದಿಸಿದ ಅಧಿಕಾರಿಗಳ ಬಳಿ ಮಾತನಾಡಿ ಸ್ಮಶಾನ ಜಗವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿzರೆ.
ಪ್ರತಿಭಟನೆ ನಡೆಸುತ್ತಿದ್ದ ಮೃತಪಟ್ಟ ಕುಟುಂಬ ವರ್ಗ ಮತ್ತು ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಮಣಿದ್ದು ಭಾನುವಾರ ರಾತ್ರಿ ೧೦ ಗಂಟೆಗೆ ದೊಡ್ಡಪ್ಪರ ಸ್ವಂತ ಜಮೀ ನಲ್ಲಿ ಶವ ಸಂಸ್ಕಾರವನ್ನು ನಡೆಸ ಲಾಗಿದೆ ಎಂದು ಹೇಳಲಾಗಿದೆ.
ಗ್ರಾಮಕ್ಕೆ ಸ್ಮಶಾನ ಇಲ್ಲದ ಕಾರಣ ೨೦೦೦ ಸಾಲಿನಲ್ಲಿ ಸರ್ವೇ ನಂಬರ್ ೨೮ ರಲ್ಲಿ ಸ್ಮಶಾನದ ಜಗಕ್ಕಾಗಿ ಭೂಮಿಯನ್ನು ಮಂಜೂರಾತಿಯನ್ನು ಮಾಡಲಾ ಗಿದ್ದು ಸದರಿ ಭೂಮಿಯನ್ನು ೨೦೦೧ ರಲ್ಲಿ ಸರ್ವೇಯನ್ನು ಮಾಡಿ ಗುರುತಿಸಿ ಸುತ್ತ ಗುಂಡಿ ತೆಗೆಸಿ ಸ್ಮಶಾನದ ಜಗವೆಂದು ನಿಗದಿ ಯಾಗಿದೆ ಅದರೆ ಜಮೀನು ಒತ್ತು ವರಿ ಅಗುತ್ತಾ ಬಂದಿದೆ ಇದರಿಂದ ಶವ ಸಂಸ್ಕಾರ ಮಾಡುವಲ್ಲಿ ಗೊಂದಲವಾಗಿದೆ ಎಂದು ಹೇಳುತ್ತಾರೆ.
ಈ ವೇಳೆಯಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ , ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ , ಸಿಪಿಐ ಎನ್.ಡಿ.ರವಿ , ತಾಲೂಕು ಪಂಚಾಯಿತಿ ಇಒ ರಾಘವೇಂದ್ರ , ಆರ್‌ಐ ಸಂತೋಷ್ , ಪಿಡಿಒ ಚಿನ್ನಯ್ಯ , ಪೊಲೀಸ್ ಇಲಾಖೆಯ ಹೊನ್ನಾಳಿ ಮಂಜು ಸೇರಿದಂತೆ ಗ್ರಾಮದ ಮುಖಂಡರು ಇದ್ದರು.