ರಂಜಾನ್ ಸಾಮೂಹಿಕ ಪ್ರಾರ್ಥನೆ ನಂತರ ನಂದಿಪುರ ಮಠಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು

ಹಗರಿಬೊಮ್ಮನಹಳಿ : ತಾಲೂಕಿನ ನಂದಿಪುರದಲ್ಲಿ ರಂಜನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಮರು ಸ್ಥಳೀಯ ಮಠಕ್ಕೆ ಭೇಟಿ ನೀಡಿ ಡಾ.ಮಹೇಶ್ವರ ಸ್ವಾಮೀಜಿಯವರ ದರ್ಶನ, ಆಶೀರ್ವಾದ ಪಡೆದರು.
ಕಳೆದೊಂದು ತಿಂಗಳಿಂದ ಶ್ರದ್ಧಾಭಕ್ತಿಯಿಂದ ಉಪವಾಸ ವ್ರತಾಚರಣೆ ಮಾಡಿರುವ ಇವರು, ಸೋಮವಾರ ಬೆಳಗ್ಗೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗ್ರಾಮದ ಹೊರ ವಲಯದಲ್ಲಿರುವ ಈದ್ಗಾದಲ್ಲಿ ಏಕಕಾಲಕ್ಕೆ ನೂರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಎ ಸಮುದಾಯಗಳು ಸಹಕಾರ, ಸಹಬಾಳ್ವೆ, ಸೌಹಾರ್ದದಿಂದ ಜೀವನ ನಡೆಸಬೇಕು. ಪ್ರಕೃತಿದತ್ತ ವಾಗಿ ಬಂದಿರುವ ಯುಗಾದಿ ಹಬ್ಬದೊಂದಿಗೆ ರಂಜನ್ ಹಬ್ಬ ಬಂದಿರುವುದು ಸೌಹಾರ್ದ ಸಂಭ್ರಮದ ಸಂಕೇತವಾಗಿದೆ ಎಂದರು.
ಮುಸ್ಲಿಂ ಸಮುದಾಯದ ಹಿರಿಯರಾದ ಮಲಾನಾ ಸಿರಾಜುದ್ದೀನ್ ಅವರನ್ನು ಡಾ.ಮಹೇಶ್ವರ ಸ್ವಾಮೀಜಿ ಗೌರವಿಸಿ, ಸನ್ಮಾನಿಸಿದರು. ಇದೇ ಸಮಯದಲ್ಲಿ ಮುಸ್ಲಿಂ ಬಾಂಧವರು ಪೂಜ್ಯರನ್ನು ಗೌರವಿಸಿದರು.
ಈ ಸೌಹಾರ್ದ ಸಂಮಭ್ರದಲ್ಲಿ ಗ್ರಾಮದ ಹಿರಿಯರಾದ ಕೆ. ನಬೀಸಾಬ್, ಕರೀಂಸಾಬ್, ಜಬ್ಬರ್ ಸಾಬ್, ಬೇಲ್ದಾರ್ ಯಮನೂರು ಸಾಬ್, ಉತ್ತಂಗಿ ಸುಬಾನ್ ಸಾಬ್, ಖಾದರ್ ಸಾಬ್, ಮಹಮ್ಮದ್ ರಫಿ, ದಾದಾಪೀರ್, ಚಾಂದಬಾಷಾ, ಅಭಕ್ಷಿ, ಸಯ್ಯದ್ ಅಲಿ, ವಾಯದ್, ರಹಿಮಾನ್ ಸಾಬ್, ಯಮನೂರು ಸಾಬ್, ರಂಜನ್ ಸಾಬ್ , ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ಇತರರು ಇದ್ದರು. ಸರ್ವರೂ ಪರಸ್ಪರ ಹಬ್ಬದ ಶುಭಾಶಯ ಹಂಚಿಕೊಂಡರು.
ಗದ್ದಿಕೆರೆ, ಸಾಲ್ಮೂರಹಳ್ಳಿ, ಬ್ಯಾಸಿಗಿದೇರಿ, ಬನ್ನಿಕಲ್ಲು, ಯಡ್ರಾಮನಹಳ್ಳಿ, ಸೊಬಟಿ ಗ್ರಾಮಗಳ ಮುಸ್ಲಿಂ ಬಾಂಧವರು ರಂಜನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *