ಶಿವಮೊಗ್ಗ : ಕೊಡುಗೈ ದಾನಿ ಎಂದೇ ಜನಮಾನಸದಲ್ಲಿ ಹೆಸರಾಗಿರುವ ಎಂ.ಶ್ರೀಕಾಂತ್ ಅವರ ಹುಟ್ಟು ಹಬ್ಬವನ್ನು ಮಾ.೨೨ರ ನಾಳೆ ಸರಳ ಸಂಭ್ರಮದಿಂದ ಆಚರಿಸಲಾಗು ವುದು ಎಂದು ಶ್ರೀಕಾಂತ್ ಅಭಿಮಾನಿ ಬಳಗದ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಶ್ರೀಕಾಂತ್ ಅವರು ನಗರದ ಜನಾಮಾನಸದಲ್ಲಿ ಉಳಿದುಕೊಂಡಿ zರೆ. ಕೊಡುಗೈ ದಾನಿ ಎಂದೇ ಅವರು ಹೆಸರಾಗಿzರೆ. ಯಾವುದೇ ಸಂಘ ಸಂಸ್ಥೆಗಳಿರಲಿ, ಕಷ್ಟ ಹೇಳಿಕೊಂಡು ಬರುವವರೆಗೆ ತಮ್ಮ ಸಹಾಯ ಹಸ್ತವನ್ನು ನೀಡುತ್ತಿದ್ದರು. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ, ಸಹಕಾರ ಮಾಡಿzರೆ. ಇಂತಹ ಧೀಮಂತ ವ್ಯಕ್ತಿಯ ೫೨ನೇ ವರ್ಷದ ಹುಟ್ಟುಹಬ್ಬವನ್ನು ನಾಳೆ ಸಂಭ್ರಮ ದಿಂದ ಆಚರಿಸಲಾಗುವುದು ಎಂದರು.
ಮಾ.೨೨ರಂದು ಬಂಜರ ಸಮುದಾಯ ಭವನದಲ್ಲಿ ಸಂಜೆ ೫ಕ್ಕೆ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಹಣ್ಣು ಹಂಪಲು ನೀಡಲಾಗುವುದು. ಕಿವುಡರ, ಅಂಧರ ವಿಕಾಸ ಕೇಂದ್ರದಲ್ಲಿ ಹೆಚ್ಚು ಸಹಕಾರ ನೀಡಲಾಗುವುದು. ಬಂಜರ ಸಮುದಾಯ ಭವನದಲ್ಲಿ ನಡೆಯುವ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿzರೆ ಎಂದರು.
ಹೆಚ್.ಪಾಲಾಕ್ಷಿ ಮಾತನಾಡಿ, ಶ್ರೀಕಾಂತ್ ಅವರು ಅಣ್ಣ ಎಂದೇ ಹೆಸರಾಗಿzರೆ. ಕಲಿಯುಗದ ಕರ್ಣ ಎಂದರೆ ತಪ್ಪಾಗಲಾರದು. ಗೆಳೆಯರ ಬಳಗದ ವತಿಯಿಂದ ಅವರ ಹುಟ್ಟುಹಬ್ಬವನ್ನು ಆಚರಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಗುವುದು ಎಂದರು.
ಪ್ರಮುಖರಾದ ನಾಗರಾಜ್ ಕಂಕಾರಿ, ಬಸವರಾಜ್, ಜ್ಯೋತಿ ಹರಳಪ್ಪ, ಕೆ.ಸಿ.ದಿವ್ಯಾ, ಭಾಸ್ಕರ್, ಉಮೇಶ್, ಸುರೇಶ್, ಮಂಜು ನಾಥ್, ಪ್ರಸನ್ನ ಇದ್ದರು.