ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ …

ಶಿವಮೊಗ್ಗ : ನಮ್ಮದು ಕೃಷಿ ಪ್ರಧಾನ ದೇಶ. ಕೃಷಿ ಸದೃಢವಾಗಿದ್ದರೆ ದೇಶ ಸದೃಢ ವಾಗಿರುತ್ತದೆ. ಕೃಷಿ ಮತ್ತು ತೋಟಗಾರಿಕೆ ಪದವೀಧರರು, ವಿದ್ಯಾರ್ಥಿಗಳು ರೈತರಿಗೆ ಲಾಭದಾಯಕವಾದ, ಪರಿಸರಕ್ಕೆ ಪೂರಕವಾದ ಕೃಷಿ ಸಂಶೋಧನೆ ಗಳನ್ನು ಕೈಗೊಂಡು ಕೊಡುಗೆ ನೀಡಬೇಕೆಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಗೌರ್‍ನರ್ ಥಾವರ್‌ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ೯ನೇ ಘಟಿಕೋತ್ಸವ ಸುಗ್ಗಿ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ದೇಶದ ಬೆನ್ನೆಲಯಬಾಗಿದ್ದು, ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ eನದಿಂದ ಎತ್ತರಕ್ಕೆ ಬೆಳೆಯಬೇಕು. ಹೆಚ್ಚುತ್ತಿರುವ ಜನಸಂಖ್ಯೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಹಿನ್ನೆಲೆ ಯಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಕೌಶಲ್ಯ ಮತ್ತು ತಂತ್ರeನವನ್ನು ಸಮರ್ಪಕವಾಗಿ ಅಳವಡಿಸಿ ಕೊಂಡು ಹೊಸ ಹೊಸ ಸಂಶೋಧನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರeನ, ಸ್ಮಾರ್ಟ್ ಅಗ್ರಿಕಲ್ಚರ್ ಕಡೆ ಗಮನ ಹರಿಸಬೇಕಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಯಂತಹ ಜಗತಿಕ ಸವಾಲು ಗಳನ್ನು ನಾವು ಎದುರಿಸುತ್ತಿರು ವಾಗ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಿಮ್ಮ ಪಾತ್ರವು ಹೆಚ್ಚು ಮಹತ್ವzಗಿದೆ. ನಿಮ್ಮ ನಾವೀನ್ಯತೆ, ತಾಂತ್ರಿಕ ಕೌಶಲ್ಯ ಮತ್ತು ಕಠಿಣ ಪರಿಶ್ರಮದ ಮೂಲಕ ನೀವು ಈ ದಿಕ್ಕಿನಲ್ಲಿ ಪರಿಹಾರಗಳನ್ನು ಕಂಡುಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕೃಷಿ ಕ್ಷೇತ್ರದಲ್ಲಿ ಪರಿಣತಿಯು ಕ್ಷೇತ್ರಗಳು ಮತ್ತು ಸಸ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಆಹಾರ ಭದ್ರತೆ, ಹಸಿರು ಕ್ರಾಂತಿ, ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಮತ್ತು ಮಾನವೀಯತೆಯ ಭವಿಷ್ಯವನ್ನು ಸಂರಕ್ಷಿಸುವಲ್ಲಿ ನಿಮ್ಮ ಪಾತ್ರವನ್ನು ಇದು ವ್ಯಾಖ್ಯಾನಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ನೀವು ಪಡೆದ eನವು ನಿಮ್ಮನ್ನು ವೈಯಕ್ತಿಕ ಯಶಸ್ಸಿನತ್ತ ಕೊಂಡೊಯ್ಯುವುದಲ್ಲದೆ ಲಕ್ಷಾಂತರ ರೈತರು, ಉದ್ಯಮಿ ಗಳಿಗೆ ಮತ್ತು ಪರಿಸರ ಪ್ರeಯ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ರೈತರಿಗೆ ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯಲು ತಾವು ಸಹಕಾರಿ ಯಾಗಬೇಕು. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯವೆಸಗ ಬೇಕು. ಇಸ್ರೇಲ್ ಅಂತಹ ಸಣ್ಣ ದೇಶ ನವೀನ ಸಾಧನ, ಕಡಿಮೆ ನೀರು ಬಳಸಿಕೊಂಡು ಉತ್ತಮ ಆದಾಯ ಪಡೆದು ಬೆಳೆಯುತ್ತಿದೆ. ನಮ್ಮಲ್ಲಿಯೂ ಅಂತಹ ತಂತ್ರeನ, ಸಾಧನ ಬಳಸಿ ಕೊಂಡು ಮುಂದುವರೆಯಬೇಕಿದೆ ಎಂದರು.
ಬೆಂಗಳೂರಿನ ರಾಷ್ಟ್ರೀಯ ಜೀವ ವಿeನ ಕೇಂದ್ರದ ನಿರ್ದೇಶಕರಾದ ಪ್ರೊ. ಎಲ್.ಎಸ್. ಶಶಿಧರ್ ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವಿಸ್ತರಣೆಯ ಮೇಲೆ ಹಾಗೂ ನಾಶವಾಗುತ್ತಿರವ ಆವಾಸಸ್ಥನಗಳನ್ನು ಪುನಶ್ಚೇತನ ಗೊಳಿಸಿ ಮುಂದುವರಿಯಬಲ್ಲ ಕೃಷಿ ಪದ್ದತಿಗಳನ್ನು ಅಳವಡಿಸಿ ಕೊಳ್ಳುವುದರ ಮೇಲೆ ನಮ್ಮ ಗಮನವನ್ನು ಕೇಂದ್ರಿಕರಿಸುವುದು ಅವಶ್ಯಕವಾಗಿದೆ ಎಂದರು.
ಪರಿಸರ ವ್ಯವಸ್ಥೆ ಹಾಗೂ ಜೈವಿಕ ವೈವಿಧ್ಯತೆ ಇವುಗಳಿಂದ ಕೃಷಿ ಹಾಗೂ ಪಶು ಸಂಗೋಪನೆ ಇವೆರಡು ನೇರವಾಗಿ ಪ್ರಭಾವಿತ ವಾಗುತ್ತದೆ. ನಮ್ಮ ದೇಶ ತನ್ನ ಪ್ರಜೆಗಳೆಲ್ಲರೂ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸುವಲ್ಲಿ ಆತ್ಮನಿರ್ಭರವಾಗಲು ಮತ್ತು ಮುಂದಿನ ದಶಕಗಳಲ್ಲಿ ಸಂಭವಿಸ ಬಹುದಾಗ ನೈಸರ್ಗಿಕ ಹಾಗೂ ಮಾನವ ನಿರ್ಮಿತ ದುರಂತಗಳ ಸಮಯದಲ್ಲಿಯೂ ಆಹಾರ ಸಂರಕ್ಷಣೆಯನ್ನು ನೀಡಲು ಸಫಲವಾಗಿದೆ ಎಂದು ಹೇಳಿದರು.
ಈ ವಿಶ್ವವಿದ್ಯಾಲಯವು ತನ್ನ ಸಂಶೋಧನೆ ಹಾಗೂ ಶಿಕ್ಷಣದ ಚಟುವಟಿಕೆಗಳಲ್ಲಿ ಇಂತಹ ಸವಾಲಾಗುವ ಸಮಸ್ಯೆಗಳ ಬಗ್ಗೆ ಗಮನವನ್ನು ಕೇಂದ್ರಿಕರಿಸಿದೆ ಯೆಂದು ತಿಳಿದು ನನಗೆ ಸಂತೋಷವಾಗಿದೆ. ಮೊದಲನೆ ದಾಗಿ ಇದು ಕೃಷಿ, ತೋಟಗಾರಿಕೆ ಹಾಗೂ ಅರಣ್ಯಶಾಸ್ತ್ರಗಳ ನ್ನೊಳಗೊಂಡ ಒಂದು ಸಮಗ್ರ ವಿಶ್ವವಿದ್ಯಾಲಯವಾಗಿದೆ. ಸುಸ್ಥಿರ ಜೀವನಕ್ಕೆ ಈ ಮೂರು ವಿeನಗಳ ಕೊಡುಗೆ ಅವಶ್ಯಕವಾಗಿದೆ. ಕೃಷಿ ಅರಣ್ಯ ಹಾಗೂ ಆಹಾರಧಾನ್ಯ ಗಳು, ಹಣ್ಣು ತರಕಾರಿಗಳು ಸೇರಿದಂತೆ ಬೆಳೆಗಳ ಆವರ್ತನೆ ಇವುಗಳಿಂದ ಭೂಮಿಯ ಕ್ಷಮತೆ ಯನ್ನು ಉತ್ತಮಗೊಳಿಸುವುದರ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸಬಹುದು. ಈ ವಿವಿ ಕೃಷಿ ಅರಣ್ಯ, ಜೈವಿಕ ಗೊಬ್ಬರಗಳು, ಜೈವಿಕ ನಿಯಂತ್ರಣ ಸೂತ್ರಗಳು, ಜೈವಿಕ ಇಂಧನಗಳು, ಪರಾಗ ಸ್ಪರ್ಷಗಳು ಇತ್ಯಾದಿ ವಿಷಯ ಗಳಲ್ಲಿ ನವೀನ ಉಪಕ್ರಮಗಳನ್ನು ತೆಗೆದುಕೊಂಡಿದೆ. ಪಶ್ಚಿಮಘಟ್ಟ ದಲ್ಲಿ ಜೀವಿಸುತ್ತಾ, ಅಲ್ಲಿನ ಪರಿಸರವನ್ನು ಸ್ವಾಭಾವಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ರಕ್ಷಿಸುತ್ತಿರುವ ರೈತ ಸಮುದಾಯಕ್ಕೆ ಈ ವಿಶ್ವವಿದ್ಯಾಲಯವು ಪ್ರಾಮುಖ್ಯತೆಯನ್ನು ಕೊಡುತ್ತಿದೆಯೆಂದು ನಾನು ಕೇಳಿದ್ದೇನೆ ಎಂದು ತಿಳಿಸಿದರು.
ಸರ್ವಜ್ಞ ಹೇಳುವಂತೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು. ಡಿವಿಜಿ ಅವರು ಋಷಿಗಳು, ರೈತರನ್ನು ಕೃಷಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಮ್ಮ ಸಹಭಾಗಿಗಳನ್ನಾಗಿ ಮಾಡಿ ಕೊಂಡು ಸಮಾಜದಲ್ಲಿ ತರ್ಕಬದ್ಧತೆ ಹೆಚ್ಚಾಗಿ ತರಲು ಇದು ಸಕಾಲವಾಗಿ ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಆರ್.ಜಗದೀಶ್ ಸ್ವಾಗತ ಭಾಷಣ ಮಾಡಿ, ಸಂಕ್ಷಿಪ್ತ ವರದಿ ಸಲ್ಲಿಸಿದರು.
ಚಿನ್ನದ ಪದಕ : ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ೧೭ ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿzರೆ. ಒಟ್ಟು ೩೧ ಚಿನ್ನದ ಪದಕಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು ೯೯೪ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ೭೯೩ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ೧೭೬ ವಿದ್ಯಾರ್ಥಿಗಳು ಹಾಗೂ ೨೫ ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆದುಕೊಂಡರು.
೨೮ ಎಂ.ಎಸ್ಸಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು ಅವರಿಗೆ ಒಟ್ಟು ೩೩ ಚಿನ್ನದ ಪದಕಗಳನ್ನು ನೀಡಲಾಯಿತು. ೧೦ ಪಿ.ಹೆಚ್.ಡಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು, ಅವರಿಗೆ ಒಟ್ಟು ೧೨ ಚಿನ್ನದ ಪದಕ ನೀಡಲಾಯಿತು.
ಪದವಿ ಚಿನ್ನದ ಪದಕ ವಿಜೇತರು(೨೦೨೫): ಸಂಜೀತಾ ಎನ್ ಎಸ್ ೪ ಪದಕ. ಪ್ರತೀಕ್ಷಾ ಎಲ್ ನಾಯ್ಕ ೨ ಚಿನ್ನದ ಪದಕ. ಮೋಹನ್ ಪ್ರಸಾದ್ ಜಿ ೧, ಚಂದನ ಆರ್ ೧, ಅರವಿಂದ ಹೆಚ್ ಆರ್ ೧, ಯಶಸ್ವಿನಿ ಎಂ.ಬಿ ೧, ಸುಪ್ರಿತ ಎಂ.ಎಂ. ೧, ಅಭಿe ನಾಯಕ್ ೧ ಒಟ್ಟು ೨೫ ಚಿನ್ನದ ಪದಕ.
ಸ್ನಾತಕ ಪದವಿ ಚಿನ್ನದ ಪದಕ ವಿಜೇತರು: ಲಹರಿ ೨, ಸಚಿನ್ ಎಲ್ ಎಂ, ಲೇಖನ ತಲಾ ೨ ಮತ್ತು ಅಭಿಷೇಕ್ ಜೆ.ಕೆ, ಕಮಲಶ್ರೀ ಎಸ್ ಡಿ , ಚಂದನ ಎಸ್, ನಂದಿತಾ ಸಿನ್ಹಾ, ಮಂಜುಶ್ರೀ ಬಿ ಯು, ಅಲೇಕ್ಯ ಬಿ.ಎಂ, ಅನಿಲ್.ಹೆಚ್.ಎಂ., ಜ್ಯೋತಿ ಈ ತೊಂಡಿ, ಸಿಂಚನ, ಮಾಧರ್ಯ ಗೌಡ, ಸಲ್ಮಾ, ಸ್ವಾತಿ ಬಿ ತಲಾ ೧ ಪದಕ ಒಟ್ಟು ೧೮ ಚಿನ್ನದ ಪದಕ ಪಡೆದು ಕೊಂಡರು.
ಪಿಹೆಚ್ ಡಿ ಚಿನ್ನದ ಪದಕವಿಜೇತರು: ದರ್ಶನ್ ಆರ್ ೨, ವಿಶಾಲ ರೆಡ್ಡಿ, ಸುಪ್ರಿಯ ಕುಮಾರಸ್ವಾಮಿ ಸಾಲಿಮಠ, ರವಿಚಂದ್ರ, ರೇಷ್ಮಾ ಕೆ ತಲಾ ೧ ಪದಕ ಒಟ್ಟು ೬ ಚಿನ್ನದ ಪದಕ ಪಡೆದಿರುತ್ತಾರೆ.
ಡಾಕ್ಟರೇಟ್ ಗೌರವ ಪ್ರದಾನ : ಕೃಷಿಕರು, ಕೃಷಿ ವ್ಯವಸ್ಥೆಗೆ ಬೆಂಬಲವಾಗಿದ್ದ ಹಾಗೂ ಸಮಾಜವಾದಿ ಚಿಂತಕರಾದ ಶ್ರೀಯುತ ಕಾಗೋಡು ತಿಮ್ಮಪ್ಪನವರು ಇವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವಿಸಲು ಅವರಿಗೆ ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಕುಲಸಚಿವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಪದವೀಧರರು ಹಾಜರಿದ್ದರು.