ಶಿವಮೊಗ್ಗ: ರಾಷ್ಟ್ರ ದ್ರೋಹದ ಕೆಲಸಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ. ಇತ್ತೀಚಿನ ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಂತೆ ಸಾಂತ್ವನ ಹೇಳಲು ಬಂದ ಹಿಂದೂ ನಾಯಕನನ್ನು ಬಂಧಿಸುತ್ತಾರೆ. ಇದು ನೀಚ ಕೃತ್ಯ ಅಲ್ಲವೇ. ಮೈಸೂರು ದಸರಾವನ್ನು ಇಡೀ ದೇಶವೇ ನೋಡುತ್ತದೆ. ಇಂತಹ ದಸರಾಕ್ಕೆ ಪರ್ಯಾಯ ವಾಗಿ ಆಚರಿಸುವ ಮಹಿಷ ದಸರಾ ಕ್ಕೆ ಅನುಮತಿ ಕೊಡುತ್ತಾರೆ. ಯಾರ ನ್ನು ಪೂಜೆ ಮಾಡಬೇಕು ಎಂಬುದೇ ಇವರಿಗೆ ಗೊತ್ತಿಲ್ಲ ಎಂದರು.
ಇಸ್ರೇಲ್ ಮತ್ತು ಪ್ಯಾಲಸ್ತೇನ್ ಯುದ್ಧ ನಡೆಯುತ್ತಿದೆ. ಭಾರತ ಇಸ್ರೇಲ್ ಪರವಾಗಿ ನಿಂತಿದೆ. ಆದರೆ ಬೆಂಗಳೂರಿನಂತಹ ನಗರ ದಲ್ಲಿ ಭಯೋತ್ಪಾದಕರ ಪರವಾಗಿ ಪ್ರತಿಭಟನೆ ಮಾಡುವವರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡು ತ್ತದೆ. ಇದು ದೇಶದ್ರೋಹದ ಕೆಲಸ ವಲ್ಲವೇ. ಭಯೊತ್ಪಾದಕರು ಅಲ್ಲಿ ಆಸ್ಪತ್ರೆಗಳಿಗೇ ರಾಕೆಟ್ ಉಡಾ ಯಿಸಿ ಕೊಲ್ಲುವಷ್ಟು ನೀಚರಾಗಿ ದ್ದಾರೆ. ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಲಿ ತೆಗೆದು ಕೊಂಡಿದ್ದು ಇದೇ ಭಯೋತ್ಪಾದಕರಲ್ಲವೇ. ಕಾಂಗ್ರೆಸ್ಸಿಗರಿಗೆ ಇದೇಕೆ ಅರ್ಥವಾ ಗುತ್ತಿಲ್ಲ. ಭಯೋತ್ಪಾದಕರ ಪರ ವಾಗಿ ಇರುವವರನ್ನು ಹೆಡೆಮುರಿ ಕಟ್ಟಬೇಕಲ್ಲವೇ. ಇನ್ನೂ ಎಷ್ಟು ದಿನ ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆ ಸ್ ಮಾಡುತ್ತದೆ. ಇದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ ಎಂದ ಅವ ರು, ಬಹುತ್ವ ಕರ್ನಾಟಕ ಸಂಘಟನೆ ಯನ್ನು ನಿಷೇಧ ಮಾಡಬೇಕು ಎಂದರು.
ಬಾಯಿಗೆ ಬಂದಂತೆ ಮಾತನಾ ಡುವ ಪ್ರೊ. ಭಗವಾನ್ ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಸಾಂತ್ವನ ಹೇಳಲು ಮುತಾ ಲಿಕ್ ಬರಬಾರದೇ. ಯಾರನ್ನು ಗಡಿಪಾರು ಮಾಡಬೇಕು, ಯಾರು ರಾಷ್ಟ್ರ ದ್ರೋಹಿಗಳು, ಯಾರು ರಾಷ್ಟ್ರಭಕ್ತರು, ಯಾವುದು ದಸರಾ ಹಬ್ಬ ಈ ಕಲ್ಪನೆ ರಾಜ್ಯ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನೆ ಮಾಡಿ ದರು.ಮಾಜಿ ಡಿಸಿಎಂ ಈಶ್ವರಪ್ಪ, ಜಿಲ್ಲಾಧ್ಯಕ್ಷ ಮೇಘರಾಜ್, ನಗರಾ ಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜನೇಶ್ವರ್, ಬಾಲು, ಶಶಿಧರ್, ಅಣ್ಣಪ್ಪ ಕೆ.ವಿ. ಉಪಸ್ಥಿತರಿದ್ದರು.
