ಆರೋಗ್ಯಕರ ಆರಂಭಗಳೇ ಭರವಸೆಯ ಭವಿಷ್ಯಗಳು…

ಓಂ ಮಿತ್ರಾಯ ನಮಃ |
ಓಂ ರವಯೇ ನಮಃ |
ಓಂ ಸೂರ್ಯಾಯ ನಮಃ |
ಓಂ ಭಾನವೇ ನಮಃ |
ಓಂ ಖಗಾಯ ನಮಃ |
ಓಂ ಪೂಷ್ಣೇ ನಮಃ |
ಓಂ ಹಿರಣ್ಯ ಗರ್ಭಾಯ ನಮಃ |
ಓಂ ಮಾರಿಚಯೇ ನಮಃ |
ಓಂ ಆದಿತ್ಯಾಯ ನಮಃ |
ಓಂ ಸವಿತ್ರೆ ನಮಃ |
ಓಂ ಅರ್ಕಾಯ ನಮಃ |
ಓಂ ಭಾಸ್ಕರಾಯ ನಮಃ |
ಎಂದು ಈ ಮೇಲಿನ ಮಂತ್ರಗಳನ್ನು ಪಠಿಸುತ್ತಾ ಯೋಗಾಸನ ವಿಧಾನವನ್ನು ಅನುಸರಿಸುತ್ತಾ ಸೂರ್ಯ ನಮಸ್ಕಾರವನ್ನು ಹನ್ನೆರಡು ಭಂಗಿಗಳಲ್ಲಿ ಮಾಡಲಾಗುತ್ತದೆ.
ಪ್ರಮುಖವಾಗಿ ಯೋಗಾಸನ, ಸೂರ್ಯ ನಮಸ್ಕಾರ, ವ್ಯಾಯಾಮ, ಮುಂಜಾನೆಯ ನಡಿಗೆ , ಸಂಜೆಯ ನಡಿಗೆ, ಪ್ರಾಣಾಯಾಮ, ಧ್ಯಾನ ಹೀಗೆ ಹಲವು ಕಾರ್ಯ ವಿಧಾನಗಳನ್ನು ಅನುಸರಿಸುತ್ತಾ ಇಂದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಇತ್ತೀಚೆಗೆ ಹೆಚ್ಚು ಗಮನ ನೀಡುತ್ತಿzರೆ.
ಇದು ಬಹಳ ಒಳ್ಳೆಯ ವಿಚಾರವೇ ಆಗಿದೆ. ವಿಶ್ವದಲ್ಲಿ ಎಲ್ಲರೂ ಆರೋಗ್ಯವಂತ ರಾಗಿರಬೇಕು. ದೇಹ ಮತ್ತು ಮನಸ್ಸು ಎರಡೂ ಲವಲವಿಕೆಯಿಂದ ಕೂಡಿರಬೇಕೆಂದರೆ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಎಲ್ಲರಿಗೂ ಆರೋಗ್ಯ, ಆರೋಗ್ಯವನ್ನು ಹೊಂದಿರುವು ಪ್ರತಿಯೊಬ್ಬ ವಿಶ್ವ ನಾಗರೀಕನ ಹಕ್ಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆಗಳ ಪ್ರಮುಖ ಉದ್ದೇಶಗಳಾಗಿವೆ. ಉತ್ತಮ ಆರೋಗ್ಯ ಸೇವೆ, ರೋಗನಿರೋಧಕತೆ, ಆರೋಗ್ಯಕರ ಜೀವನಶೈಲಿ, ಮತ್ತು ಆರೋಗ್ಯದ ಮೇಲಿನ ಹಕ್ಕುಗಳ ಬಗ್ಗೆ ಮಾಹಿತಿ ನೀಡುವುದು ಪ್ರಮುಖ ಕಾರ್ಯವೇ ಆಗಿದೆ.


೨೧ನೇ ಶತಮಾನದ ಸ್ಪರ್ಧಾತ್ಮಕ ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಮನುಷ್ಯ ತಾನು ನಿರ್ವಹಿಸುವ ಕೆಲಸದಲ್ಲಿ ಸಾಮರ್ಥ್ಯ ಹೆಚ್ಚಿದೆ. ಗಣಕಯಂತ್ರದ ಮುಂದೆ ಕುಳಿತು ಹತ್ತಾರು ಗಂಟೆಗಳ ಕಾಲ ದಿನದಲ್ಲಿ ಕೆಲಸ ಮಾಡಬೇಕಿದೆ. ಕೆಲಸದಲ್ಲಿ ವೇಗವನ್ನು ಹೆಚ್ಚಿಸಲು ವೇಗೋತ್ಕರ್ಷವನ್ನು ಇಮ್ಮಡಿ – ಮುಮ್ಮಡಿಗೊಳಿಸುತ್ತಿzನೆ. ಕಚ್ಚಾವಸ್ತುಗಳ ಬಳಕೆಯ ಹೆಚ್ಚಳ, ಸಿದ್ಧವಸ್ತುಗಳ ಉತ್ಪಾದನೆಯ ಹೆಚ್ಚಳ, ಸಾಗಾಣಿಕೆಯ ವೇಗ, ಮಾರಾಟದ ವೇಗ, ಕೃತಕ ಬೇಡಿಕೆಯ ಸೃಷ್ಟಿ , ನಷ್ಟ ಸಂಭವಿಸುವ ಭಯ ಇವೆಲ್ಲವೂ ಮನುಷ್ಯನನ್ನು ಇಂದು ಅನಾರೋಗ್ಯದತ್ತ ದೂಡಿವೆ.
ಇದಕ್ಕೆ ವಿeನದ ಬೆಳವಣಿಗೆ, ಯಂತ್ರಗಳ ಮಿತಿಮೀರಿದ ಕೆಲಸ, ತಂತ್ರeನದ ವಿಧಾನಗಳಲ್ಲಿ ತೀವ್ರತರ ಬದಲಾವಣೆ, ಆರ್ಥಿಕ ವೆಚ್ಚ ಸರಿದೂಗಿ ಸುವ ಚಿಂತನೆ ಹೀಗೆ ಪ್ರತಿಯೊಂದು ಕ್ಷೇತ್ರವು ತನ್ನ ಕಾರ್ಯ ವೈಖರಿಯಲ್ಲಿ ಇಂದು ಅವಿಶ್ರಾಂತ ನಿರಂತರತೆಯನ್ನು ಕಾಯ್ದು ಕೊಳ್ಳುತ್ತಿದೆ. ಈ ರೀತಿಯ ಅವಿಶ್ರಾಂತ ನಿರಂತರ ಕಾರ್ಯ ಚಟುವಟಿಕೆಯಿಂದಾಗಿ ಮನುಷ್ಯನ ದೇಹ ಮತ್ತು ಮನಸ್ಸುಗಳು ಏಕತಾನತೆಯನ್ನು ಹೊಂದಿ ಆಲಸ್ಯೆದೆಡೆಗೆ ಕೊಂಡೊಯ್ಯುತ್ತವೆ. ಆಲಸ್ಯವೇ ಅನಾರೋಗ್ಯಕ್ಕೆ ಮೂಲ ಮಾರ್ಗ ಎನ್ನುವಂತೆ ಮಾನವನ ಆರೋಗ್ಯದಲ್ಲಿ ದಿನೇ ದಿನೇ ಕ್ಷೀಣತೆ ಕಂಡು ಬರುತ್ತದೆ.
ಮಾನವ ಮತ್ತು ಆತನ ಜಗತ್ತು ಇಂದು ಆರೋಗ್ಯದತ್ತ ಬಹಳಷ್ಟು ಗಮನ ನೀಡುತ್ತದೆ. ಏಕೆಂದರೆ ಬಿಡುವಿಲ್ಲದೆ ಏರಿಕೆಯಾಗುತ್ತಿರುವ ಮರಣ ಪ್ರಮಾಣ, ಆಘಾತ – ಅಪಘಾತಗಳು, ದೇಹದಲ್ಲಿ ಮಿತಿಮೀರಿದ ಬೊಜ್ಜು, ದಿನೇ ದಿನೇ ಹೆಚ್ಚಳವಾಗುತ್ತಿರುವ ವಿಭಿನ್ನ ರೀತಿಯ ಖಾಯಿಲೆಗಳು, ಆಸ್ಪತ್ರೆಗಳಲ್ಲಿ ಕಂಡು ಬರುವ ರೋಗಿಗಳ ವಿಚಿತ್ರಕಾರಕ ರೋಗ ಗಳು ಹಾಗೂ ಅವರ ನರಳಾಟ ಇವೆಲ್ಲವನ್ನೂ ನೋಡಿ ನೋಡಿ ಮನುಷ್ಯ ಕುಬ್ಜನಾಗಿ ಬಿಟ್ಟಿzನೆ.
ವಿಶ್ವದ ಎಲ್ಲ ಜನರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ವಿಶ್ವ ಆರೋಗ್ಯ ಸಂಸ್ಥೆಯು ಏ.೭ನೇ ದಿನಾಂಕವನ್ನು ಗುರುತಿಸಿ ವಿಶ್ವ ಆರೋಗ್ಯ ದಿನವೆಂದು ನಿರ್ದೇಶಿಸಿ ಘೋಷಿಸಿದೆ. ಈ ನಿರ್ದೇಶನದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ವಿಶ್ವ ಆರೋಗ್ಯ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುತ್ತವೆ. ಏಕೆಂದರೆ ಯಾವುದೇ ಒಂದು ದೇಶದ ಸಮಗ್ರ ಪ್ರಗತಿಯಲ್ಲಿ ಆರೋಗ್ಯ ಬಹಳ ಪ್ರಮುಖ ಅಂಶವಾಗಿದೆ. ಈ ದಿನವು ನಮಗೆ ನಮ್ಮ ಆರೋಗ್ಯದ ಮೇಲೆ ಗಮನ ಹರಿಸಲು ಪ್ರೇರಣೆ ನೀಡುವ ಜೊತೆಗೆ, ಸಮಗ್ರ ಸಮಾಜದ ಆರೋಗ್ಯ ಸುಧಾರಣೆಯತ್ತ ಕ್ರಮವಹಿಸಲು ಒತ್ತಾಯಿಸುತ್ತದೆ. ಈ ದಿನದ ಉದ್ದೇಶ ವೆಂದರೆ ಜನರಲ್ಲಿ ಆರೋಗ್ಯದ ಮಹತ್ವವನ್ನು ಜಗೃತಿಗೊಳಿಸುವುದು ಮತ್ತು ಸಮಾನ ಆರೋಗ್ಯ ಸೇವೆಗಳ ಲಭ್ಯತೆ ಕುರಿತು ಚಿಂತನೆಗೆ ಅವಕಾಶ ನೀಡುವುದಾಗಿದೆ.
ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯು ಔಚಿತ್ಯಪೂರ್ಣ ಹೇಳಿಕೆಯನ್ನು ಆರೋಗ್ಯದ ಕುರಿತಾಗಿ ಅಭಿಪ್ರಾಯ ಪಟ್ಟಿದೆ, ಆರೋಗ್ಯ ಎಂಬ ಪದವು ವ್ಯಕ್ತಿಯಲ್ಲಿ ಖಾಯಿಲೆ ಇಲ್ಲದಿರುವುದನ್ನು ಮತ್ತು ಅವನ ಭೌತಿಕ ಹಾಗೂ ಸಾಮಾಜಿಕ ಪರಿಸರಗಳಿಗೆ ಸಂಬಂಧಿಸಿದಂತೆ ಅವನ ಶರೀರ ಹಾಗೂ ಮನಸ್ಸುಗಳು ಹೆಚ್ಚಿನ ಅನ್ಯೋನ್ಯತೆಯನ್ನು ಅನುಷ್ಠಾನಕ್ಕೆ ತಂದಿರುವ ಸ್ಥಿತಿಯನ್ನು ಸೂಚಿಸುತ್ತದೆ. ತನ್ಮೂಲಕ ಅವನು ಪೂರ್ಣ ಪ್ರಮಾಣದಲ್ಲಿ ಜೀವನವನ್ನು ಅನುಭವಿಸುವಂತೆ ಹಾಗೂ ಉತ್ಪಾದನಾ ಸಾಮರ್ಥ್ಯದ ಗರಿಷ್ಠ ಮಟ್ಟವನ್ನು ತಲುಪುವಂತೆ ಮಾಡುತ್ತದೆ.
ಮಾನವನ ನಿಜವಾದ ಸಂಪತ್ತು ಎಂದರೆ ಆರೋಗ್ಯ. ಹೆಲ್ತ್ ಈಸ್ ವೆಲ್ತ್ ಅಂದರೆ ಆರೋಗ್ಯವೇ ಭಾಗ್ಯ ಎಂಬ ಮಾತು ಆರೋಗ್ಯದ ಮಹತ್ವವನ್ನು ಒತ್ತಿ ಹೇಳುತ್ತದೆ. ಎಷ್ಟೇ ಹಣ, ಒಡವೆ, ಆಸ್ತಿ, ಅಂತಸ್ತು, ಐಶ್ವರ್ಯವಿzಗ್ಯೂ ಆರೋಗ್ಯವಿಲ್ಲದಿದ್ದರೆ ಏನು ಉಪಯೋಗ? ಹೌದಲ್ಲವೇ, ಆರೋಗ್ಯ ಭಾಗ್ಯವೇ ನಿಜವಾದ ಐಶ್ವರ್ಯ.
ಮಾನವನ ಬದುಕು ಸುಖ ಸಂತೋಷವಾಗಿರಲು ಆರೋಗ್ಯವೇ ಮುಖ್ಯವಾಗಿರುತ್ತದೆ. ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ ಅಂದರೆ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಇಲ್ಲಿ ಸದೃಢವಾದ ದೇಹ ದೈಹಿಕ ಆರೋಗ್ಯವನ್ನು ಸೂಚಿಸಿದರೆ, ಸದೃಢವಾದ ಮನಸ್ಸು ಮಾನಸಿಕ ಆರೋಗ್ಯವನ್ನು ಸೂಚಿಸುತ್ತದೆ. ಆರೋಗ್ಯ ಎಂದರೆ ವ್ಯಕ್ತಿಯು ದೈಹಿಕ ಮತ್ತು ಮಾನಸಿಕವಾಗಿ ಇರುವ ಸದೃಢ ಸ್ಥಿತಿ. ವ್ಯಕ್ತಿ ದೈಹಿಕವಾಗಿ ಶಕ್ತಿವಂತನಾಗಿರ ಬೇಕು. ಮಾನಸಿಕವಾಗಿ ಪರಿಶುದ್ಧನಾಗಿರಬೇಕು.
ವಿಶ್ವ ಆರೋಗ್ಯ ದಿನವನ್ನು ಆಧಾರ ವಾಗಿಟ್ಟುಕೊಂಡು ವಿವಿಧ ಕಾರ್ಯಾಗಾರ ಗಳು, ಜಗೃತಿ ಅಭಿಯಾನಗಳು, ಆರೋಗ್ಯ ಶಿಬಿರಗಳು ಮತ್ತು ಸಮ್ಮೇಳನಗಳು ಆಯೋಜಿಸಲಾಗುತ್ತವೆ. ಪ್ರತೀ ವರ್ಷವೂ ಏ.೭ ರಂದು ಆರೋಗ್ಯದ ಕಾಳಜಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ‘ವಿಶ್ವ ಆರೋಗ್ಯ ದಿನ’ ವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾನವರ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಕರ ಯೋಗಕ್ಷೇಮವನ್ನು ಪ್ರಪಂಚದಾದ್ಯಂತ ಪ್ರತಿವರ್ಷವೂ ಆಚರಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯು ಮಾನವರು ಮತ್ತು ಗ್ರಹವನ್ನು ಆರೋಗ್ಯವಾಗಿಡಲು ಅಗತ್ಯವಿರುವ ಜಾಗೃತಿಕ ತುರ್ತು ಕ್ರಮಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದ ಸಮಾಜಗಳನ್ನು ರಚಿಸಲು ಚಳುವಳಿಯನ್ನು ಉತ್ತೇಜಿಸು ತ್ತದೆ. ಹಾಗಾಗಿ ಎ ರಾಷ್ಟ್ರಗಳು ಏ. ೭ ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ರೀತಿಯ ಅನಾರೋಗ್ಯದ ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕೆಂದು ನಿರ್ದೇಶನ ನೀಡಿದೆ. ಈ ದಿನದಂದು ನೈರ್ಮಲ್ಯ ಯುಕ್ತ ಸಮಾಜಕ್ಕೆ ಅವಶ್ಯಕ ವಾದ ಸ್ವಚ್ಛತಾ ಅಭ್ಯಾಸಗಳು, ನೀರಿನ ಸಂರಕ್ಷಣೆ, ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯ ನಿಷೇಧ ಹಾಗೂ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಉತ್ತಮ ರೀತಿಯಲ್ಲಿ ಜೀವನ ನಡೆಸಲು ಆರೋಗ್ಯವು ಅತ್ಯಾವಶ್ಯಕ ವಾಗಿದೆ. ಆದರೆ ಭಾರತದ ಆರೋಗ್ಯ ಅಷ್ಟು ಆರೋಗ್ಯಕರವಾಗಿಲ್ಲ ಎಂಬುದು ಆಗಿಂದಾಗ್ಗೆ ಕೇಳಿಬರುತ್ತಿರುವ ಸಂಗತಿಯಾಗಿದೆ.
ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಜನರ ಆರೋಗ್ಯ ಸುಧಾರಣೆಗಳಿಗೆ ಸ್ವಾತಂತ್ರ್ಯಾ ನಂತರದ ವರ್ಷಗಳಿಂದ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಆದರೂ ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಸುಧಾರಣೆ ಅಗತ್ಯವಿರು ವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಎಲ್ಲರೂ ಆರೋಗ್ಯ ವಂತರಾಗಿ ಬದುಕಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ, ಸ್ವಚ್ಛತೆಯ ಬಗ್ಗೆ ಜನಸಾಮಾನ್ಯರಿಗೆ ಅರಿವಿನ ಕೊರತೆ ಮುಂತಾದ ಅಂಶಗಳನ್ನು ಪಟ್ಟಿ ಮಾಡಬಹುದು. ಅರಿವು ಮೂಡಿಸುವುದ ಕ್ಕಾಗಿ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಸಂಸ್ಥೆಗಳಲ್ಲಿ ಆರೋಗ್ಯದ ಕುರಿತು ವಿಚಾರ ಗೋಷ್ಠಿಗಳು, ಜಥಾಗಳು, ಪೋಸ್ಟರ್ ಸ್ಪರ್ಧೆಗಳು, ರಕ್ತದಾನ ಶಿಬಿರಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ- ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು ಎಂದು ದೇಶದ ಸರ್ವ ನಾಗರೀಕರೂ ತಿಳಿದು ಕೊಳ್ಳಬೇಕಾದುದು ಇಂದು ಅತೀ ಅಗತ್ಯವೆನಿಸಿದೆ.
ಮಾನವನ ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಆಹಾರದ ಪಾತ್ರ ಅತೀ ಮುಖ್ಯವಾಗಿದೆ. ಆಹಾರ ವಿಲ್ಲದೆ ಮಾನವ ಬದುಕಲು ಸಾಧ್ಯವಾಗದು. ಆದರೆ ಆಹಾರ ಹಿತಮಿತವಾಗಿರಬೇಕು ಪೌಷ್ಟಿಕಾಂಶ ಯುಕ್ತ ಆಹಾರವಾಗಿರಬೇಕು. ದೈಹಿಕ ಆರೋಗ್ಯಕ್ಕೆ ನಿಗದಿತ ವ್ಯಾಯಾಮವೂ ಅಗತ್ಯವಾಗಿದೆ. ಅಂತೆಯೇ ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದೆ. ಮನಸ್ಸು ಅತೀ ಚಂಚಲ ಮತ್ತು ಸೂಕ್ಷ್ಮವಾಗಿರುವುದರಿಂದ ಮನೋನಿಗ್ರಹ ಅತೀ ಅವಶ್ಯವೆನಿಸಿದೆ. ಒಳ್ಳೆಯ ಅಭ್ಯಾಸ, ಸಜ್ಜನರ ಸ್ನೇಹ, ಸುಸಂಸ್ಕೃತಿ, ನಡೆ- ನುಡಿ ಇವು ಮನಸ್ಸನ್ನು ಸಂತೋಷವಾಗಿಡ ಬಲ್ಲವು. ಮಾನಸಿಕ ಶಾಂತಿ ಅತೀ ಅಗತ್ಯವಾಗಿರು ವುದರಿಂದ, ಅದನ್ನು ಯೋಗಾಭ್ಯಾಸ, ಧ್ಯಾನ ಮತ್ತು ಸದಾಚಾರ, ಸದ್ವರ್ತನೆಗಳಿಂದ ಸಂಪಾದಿಸಲು ಪ್ರಯತ್ನ ಮಾಡಬೇಕಾಗು ತ್ತದೆ. ಕ್ರಿಯಾಶೀಲತೆ, ಉತ್ತಮ ವಿಚಾರ, ಉತ್ತಮ ಆಹಾರ, ವ್ಯಾಯಾಮ ಇವು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿವೆ. ನಾವು ಧರಿಸುವ ಉಡುಪು, ನಮ್ಮ ಸುತ್ತ ಮುತ್ತಲ ಸ್ವಚ್ಚತೆ, ಮನರಂಜನೆ, ಸರಿಯಾದ ಊಟ, ಸರಿಯಾದ ನಿದ್ರೆ ಮತ್ತು ವಿಶ್ರಾಂತಿ ಅಗತ್ಯವಾಗಿ ಬೇಕಾಗುತ್ತದೆ. ಆಧುನಿಕ ಜಗತ್ತಿನ ಒತ್ತಡ, ದುಗುಡ, ಹತಾಶೆ, ನಿರಾಶೆ, ದುಶ್ಚಟಗಳಿಂದ ದೂರವಿದ್ದಷ್ಟೂ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದಲೇ ನಾವು ಹೇಳುತ್ತೇವೆ ಆರೋಗ್ಯವಂತ ವ್ಯಕ್ತಿ ರಾಜನಿಗಿಂತಲೂ ಶ್ರೇಷ್ಠ. ಇಂದಿನ ವಿeನ ತಂತ್ರeನ ಯುಗದಲ್ಲಿಯೂ ಕೊರೋನಾ ಮಹಾ ಮಾರಿ ಸಂಪೂರ್ಣ ಜಗತ್ತನ್ನೇ ತಲ್ಲಣ ಗೊಳಿಸಿದೆ. ಕೊರೋನಾ ಒಂದು ಸೂಕ್ಷ್ಮ ವೈರಾಣುವಾಗಿದ್ದು ಎಲ್ಲಿ, ಹೇಗೆ, ಯಾರಿಂದ ಯಾರಿಗೆ ಹರಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದಲೇ ವೈಯಕ್ತಿಕ ಸ್ವಚ್ಚತೆ, ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಸ್ವಪ್ರeಯಿಂದ ತನ್ನ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.
ಆರೋಗ್ಯಕರ ನೆರೆಹೊರೆ, ಆರೋಗ್ಯಕರ ಸ್ನೇಹ, ಧನಾತ್ಮಕ ಚಿಂತನೆ ಮುಂತಾದವುಗಳು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ. ಆರೋಗ್ಯಕರ ಜನಾಂಗವು ಆರೋಗ್ಯಕರ ರಾಷ್ಟ್ರವನ್ನು ನಿರ್ಮಾಣ ಮಾಡಲು ಪೂರಕವಾಗಿ ರುತ್ತದೆ. ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮತೋಲಿತ ಆಹಾರ, ಶಾರೀರಿಕ ಚಟುವಟಿಕೆ, ಮನಃಸ್ಥಿತಿ, ನಿದ್ರೆ ಇತ್ಯಾದಿ ಆರೋಗ್ಯದ ಪ್ರಮುಖ ಅಂಶಗಳ ಬಗ್ಗೆ ವಿಶ್ವ ಆರೋಗ್ಯ ದಿನದಂದು ಅರಿವು ಮೂಡಿ ಸಲು ಹೆಚ್ಚು ಮಹತ್ವ ನೀಡಲಾಗುತ್ತದೆ.
ಪ್ರತಿ ವರ್ಷವೂ ವಿಶ್ವ ಆರೋಗ್ಯ ಸಂಸ್ಥೆಯು ಜನ್ಮ ತಾಳಿ ೭೫ ವರ್ಷಗಳು ಪೂರ್ಣಗೊಂಡಿರುವ ಈ ಸಂದರ್ಭದಲ್ಲಿ ಒಂದು ಮಹತ್ವ ಪೂರ್ಣವಾದ ಮತ್ತು ಅರ್ಥಪೂರ್ಣ ಘೋಷಣೆಯನ್ನು ಹೊರಡಿಸಿದೆ. ಅಂತೆಯೇ ೨೦೨೫ರ ವಿಶ್ವ ಆರೋಗ್ಯ ದಿನದ ಥೀಮ್, ಆರೋಗ್ಯಕರ ಆರಂಭಗಳು, ಭರವಸೆಯ ಭವಿಷ್ಯಗಳು ವಿಶ್ವವನ್ನು ಆರೋಗ್ಯಕರವಾಗಿ ನಿರ್ಮಿಸು ವುದು ಪ್ರಮುಖ ಉದ್ದೇಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆಶಯದಂತೆ ನಾವೆಲ್ಲರೂ ಇಂದು ಆರೋಗ್ಯಕರ ಜಗತ್ತಿನ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಕಾಲಕ್ಕೆ ನೀಡಬೇಕಾದ ಆರೋಗ್ಯ ಸೇವೆಗೆ ಪ್ರಾಮುಖ್ಯತೆ ನೀಡುವುದು. ವಿವಿಧ ರೋಗಗಳಿಗೆ ತುತ್ತಾಗುವ ಕಾರಣ ಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಗತಿ ಮೂಡಿಸುವುದು. ದುಶ್ಚಟಗಳಿಂದ ದೂರವಿರಿಸುವ ಕ್ರಮಗಳು ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವುದರ ಮೂಲಕ ಆರೋಗ್ಯವಂತ ಪ್ರಜೆಗಳನ್ನು ರೂಪಿಸಬೇಕಿದೆ.
ಏ.೭, ೨೦೨೫ರ ವಿಶ್ವ ಆರೋಗ್ಯ ದಿನ ಆಚರಣೆಯ ಹಿಂದೆಂದಿಗಿಂತಲೂ ಪ್ರಸ್ತುತದಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ ಮತ್ತು ಅಗತ್ಯ ವೆನಿಸಿದೆ. ಈ ದಿನದಂದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸರ್ವರೂ ಪಣತೊಡೋಣ. ಅಂತಿಮವಾಗಿ, ನಾವು ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಗಳನ್ನು ತರುವುದರಿಂದ ದೊಡ್ಡ ಬದಲಾವಣೆ ಸಾಧ್ಯ. ಬೆಳಿಗ್ಗೆ ಓಡಾಟ, ಹಸಿವಿzಗ ಮಾತ್ರ ಊಟ, ನೀರನ್ನು ಹೆಚ್ಚು ಕುಡಿಯುವುದು, ಹೆಚ್ಚು ಹಸಿ ತರಕಾರಿಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಬಹುಮಟ್ಟಿಗೆ ಸುಧಾರಿಸ ಬಹುದು. ಈಗಿನ ಸಮಾಜದಲ್ಲಿ ನಮ್ಮ ಶಕ್ತಿ, ಸಾಮಾರ್ಥ್ಯ, ಉತ್ಸಾಹ, ಮತ್ತು ಚೈತನ್ಯಕ್ಕೆ ಧಕ್ಕೆ ಬಾರದಂತೆ ತಡೆಯೋಣ. ಶುದ್ಧ ನೀರು, ಶುದ್ಧ ಗಾಳಿ, ಶುದ್ಧ ಆಹಾರ ಸೇವಿ ಸೋಣ. ಆರೋಗ್ಯವನ್ನು ಕಾಪಾಡಿ ಕೊಳ್ಳೋಣ.

  • ಕೆ.ಎನ್. ಚಿದಾನಂದ

Leave a Reply

Your email address will not be published. Required fields are marked *