ಶಿವಮೊಗ್ಗ: ಅಕ್ರಮ ಮರಳು ದಂದೆಕೋರರ ವಿರುದ್ಧ ಸಿಡಿದೆದ್ದು ಬಂಧಿಸಲು ಮುಂದಾದ ಮಹಿಳಾ ಅಧಿಕಾರಿಯ ವಿರುದ್ಧ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರ ಪುತ್ರ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದನ್ನು ಖಂಡಿಸಿ ಫೆ. ೧೪ರ ಶುಕ್ರವಾರ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ಭದ್ರಾವತಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇಸ್ಪೀಟ್ ದಂಧೆಯಂತೂ ಎಗ್ಗಿಲ್ಲದೇ ನಿತ್ಯವೂ ಶಿಫ್ಟ್‌ನಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ಷೇತ್ರದ ಶಾಸಕರ ಪುತ್ರರು ಸುಮಾರು ೧೨ ಕಡೆ ಇಸ್ಪೀಟ್ ಜೂಜಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ರಾಜಾರೋಷವಾಗಿ ನಡೆಸುತ್ತಿzರೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ, ಬೇರೆ ಬೇರೆ ರಾಜ್ಯಗಳಿಂದ ಭದ್ರಾವತಿಗೆ ಇಸ್ಪೀಟ್ ಆಡಲು ಜೂಜುಕೋರರು ಬರುತ್ತಾರೆ. ಜೊತೆಗೆ ಗಾಂಜ ಹಾವಳಿ ಹೆಚ್ಚಿದೆ. ಗೋವಾದಲ್ಲಿ ಇರುವಂತೆ ಒಂದು ರೀತಿಯ ಜೂಜಾಟದ ಅಡ್ಡೆಯಾಗಿ, ಕ್ಯಾಸಿನೋ ಆಗಿ ಭದ್ರಾವತಿ ಹಂತ ಹಂತವಾಗಿ ಪರಿವರ್ತನೆ ಯಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಶಾಸಕರ ಬೆದರಿಕೆಗೆ ಜೂಜುಕೋರರ ವಿರುದ್ಧ ಯಾವ ಕೇಸನ್ನೂ ದಾಖಲಿಸಿಕೊ ಳ್ಳುತ್ತಿಲ್ಲ. ಬಹುತೇಕ ಅಧಿಕಾರಿಗಳು ಶಾಸಕರ ಕುಟುಂಬದ ಕೈಗೊಂಬೆಯಾಗಿ zರೆ. ಈ ಎಲ್ಲದರಿಂದ ಭದ್ರಾವತಿ ನಗರ ಬಿಡುಗಡೆಯಾಗಬೇಕಾಗಿದೆ ಎಂದು ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಮಾತನಾಡಿ, ಮಹಿಳಾ ಅಧಿಕಾರಿಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಬೇಕೋ ಅವರನ್ನು ಬಂಧಿಸಿಲ್ಲ. ಅಲ್ಲಿನ ಶಾಸಕರ ಮಕ್ಕಳ ದುರ್ವರ್ತನೆ ಮಿತಿ ಮೀರುತ್ತಿದೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಡೀ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು. ಶಾಸಕ ಬಿ.ಕೆ. ಸಂಗಮೇಶ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿ ಯುವ ಘಟಕದ ಕಾರ್ಯಾಧ್ಯಕ್ಷ ಎಸ್. ಎಲ್. ನಿಖಿಲ್, ರೈತ ಘಟಕದ ಜಿಲ್ಲಾಧ್ಯಕ್ಷ ದ್ಯಾನೇಶಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ನಾಗೇಶ್ ನಾಯ್ಕ, ಪ್ರೇಮ್ ಕುಮಾರ್, ಸುನಿಲ್, ಲೋಹಿತ್, ನಿರಂಜನ್, ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ಶಾಸಕರ ಕುಟಂಬಸ್ಥರ ಮಿತಿಮೀರಿದ ಗೂಂಡಾ ವರ್ತನೆ: ಕಿಡಿಕಾರಿದ ಮಧುಕುಮಾರ್
