ಉಡುತಡಿಯಲ್ಲಿಂದು ಅ. ಭಾ. ಕವಿಯತ್ರಿಯರ ಸಮ್ಮೇಳನಕ್ಕೆ ಚಾಲನೆ

ಶಿವಮೊಗ್ಗ : ಕುವೆಂಪು ರಂಗಮಂದಿರದಲ್ಲಿ ನ. ೨೨ರ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕವಿಯತ್ರಿಯ ರಾಷ್ಟ್ರೀಯ ಸಮ್ಮೇಳನವು ಉಡುತಡಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿದೆ.
ಎಐಪಿಸಿಯ ರಾಷ್ಟ್ರೀಯ ಕಾರ್ಯದರ್ಶಿ ಜಿ.ಎಸ್ ಸರೋಜ ಸ್ವಾಗತಿಸಿದರು. ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅಕ್ಕಮಹಾದೇವಿ ನಾಡಿನ ಮೊದಲ ಕವಯತ್ರಿ, ಆಕೆಯ ಧೈರ್ಯ, ದಿಟ್ಟತನ ಮಹಿಳೆಯರಿಗೆ ಇಂದಿಗೂ ಮಾದರಿಯಾಗಿದೆ. ಅಕ್ಕನ ಜನ್ಮಸ್ಥಳ ವಾದ ಉಡುತಡಿಯಲ್ಲಿ ರಾಷ್ಟ್ರೀಯ ಮಟ್ಟದ ಮಹಿಳಾ ಸಮಾವೇಶಕ್ಕೆ ಚಾಲನೆ ದೊರೆಯುತ್ತಿ ರುವುದು ಹೆಮ್ಮೆಯ ವಿಷಯವಾಗಿದೆ. ವಚನಗಳ ಪಿತಾಮಹ ಫ.ಗು. ಹಳಕಟ್ಟಿ ಮತ್ತು ಶಿವಶರಣರ ವಚನಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದರ ಲ್ಲದೆ, ಉಡುತಡಿಯ ಅಭಿವೃದ್ಧಿಯ ವಿಚಾರವಾಗಿ ಹಲವಾರು ವಿಷಯಗಳನ್ನು ತಿಳಿಸಿದರು.
ಎಐಪಿಸಿಯ ಸಂಸ್ಥಾಪಕರು ಅಲಿಘಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಲಾರಿ ಆಜದ್ ರವರು ಸಾಹಿತ್ಯ ಜ್ಯೋತಿಯನ್ನು ಬೆಳಗಿಸಿ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದು ಈ ಸಮ್ಮೇಳನಕ್ಕೆ ಭಾರತ ದೇಶಾದ್ಯಂತ ಅಲ್ಲದೆ ವಿದೇಶಗಳಿಂದಲೂ ಕೂಡ ಪ್ರತಿನಿಧಿಗಳು ಆಗಮಿಸುತ್ತಿದ್ದು ಇಂತಹ ಒಂದು ಅಭೂತ ಪೂರ್ವ ಸಮ್ಮೇಳನ ಯಶಸ್ವಿಯಾಗಿ ನೆರವೇ ರಲಿ ಎಂದು ಶುಭ ಕೋರಿದರು.
ಮುಖ್ಯ ಅತಿಥಿಯಾಗಿದ್ದ ಡಾ. ವಿಜಯ ದೇವಿ ಅವರು ಪ್ರಪಂಚದ ಅನುಭಾವಿ ಸಾಹಿತ್ಯದ ಮೊದಲ ಕವಿಯತ್ರಿ ಅಕ್ಕಮಹಾ ದೇವಿಯ ಕ್ಷೇತ್ರದಲ್ಲಿ ಇಂತಹ ಒಂದು ಸಮ್ಮೇಳನದ ಉದ್ಘಾಟನೆ ಚಿರಸ್ಮರಣೀಯವಾಗಿದೆ ೧೩೦೦೦ ಸದಸ್ಯರನ್ನೊಳಗೊಂಡ ಈ ಸಂಸ್ಥೆ ಇನ್ನೂ ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.