ರೈತರಿಗೆ ಕಿರುಕುಳ ನೀಡಿದರೆ ಶಿಸ್ತುಕ್ರಮ…

ದಾವಣಗೆರೆ: ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬಹಳ ದೌರ್ಜನ್ಯ ಮಾಡಿ, ಕಿರುಕುಳ ಕೊಡುತ್ತಿದ್ದು, ಇನ್ಮುಂದೆ ರೈತರನ್ನು ಒಕ್ಕಲೆಬ್ಬಿಸಲು ಕಿರುಕುಳ ನೀಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನಿಲೋಗಲ್ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಮತ್ತು ಜನತಾ ದರ್ಶನ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಾಶ್ರಿ ತರು ಆಶ್ರಯ ಮನೆ ನೀಡುವಂತೆ ಸಾಕಷ್ಟು ಮನವಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ತಹಸೀಲ್ದಾರ್, ಎಡಿಎಲ್‌ಆರ್, ಕಂದಾಯ ಅಧಿಕಾರಿಗಳು ಮತ್ತು ಪಿಡಿಒಗಳು ಎಲ್ಲಿ ನಿವೇಶನ ಇವೆ, ಎಲ್ಲಿಲ್ಲಿ ಗೋಮಾಳ ಜಗ ಇದೆ. ಅವುಗ ಳನ್ನು ಗುರುತಿಸಿ ಹದ್ದುಬಸ್ತ್ ಮಾಡ ಬೇಕು. ಆಶ್ರಯ ಮನೆ ಕಟ್ಟಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ ದರು.
ಚೀನಾದಲ್ಲಿ ಬೇರೆ ರೀತಿಯ ಸೋಂಕು ಹರಡುವ ಸಾಧ್ಯತೆ ಇದ್ದು, ದೇಶದ ಎ ರಾಜ್ಯಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೆಂದ್ರ ಸರ್ಕಾರ ಸೂಚನೆ ನೀಡಿರು ವುದರಿಂದ ಆರೋಗ್ಯ ಇಲಾಖೆ ಹೆಚ್ಚಿನ ಜಗೃತಿ ವಹಿಸಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೋಗ ಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿ ದರು.
ನಿಲೋಗಲ್ ಗ್ರಾಪಂ ವ್ಯಾಪ್ತಿ ಯ ಗ್ರಾಮಗಳ ೨೫ ಪಡಿತರದಾ ರರಿಗೆ ೫ ಕೆಜಿ ಅಕ್ಕಿ ಹಣ, ೩೦ ಜನ ಮಹಿಳೆಯರಿಗೆ ಗೃಹಲಕ್ಷ್ಮೀಯ ೨ ಸಾವಿರ ರೂ. ಹಣ ಬಂದಿಲ್ಲ ಎಂದು ಮಹಿಳೆಯರು ದೂರಿzರೆ. ಕೂಡ ಲೇ ಅವರಿಗೆ ಸೌಲಭ್ಯ ತಲುಪುವಂತೆ ಅಧಿಕಾರಿಗಳು ಗಮನ ಹರಿಸ ಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ೧ ಕೆಜಿ ಅಕ್ಕಿ ಕಡಿತ ಮಾಡಿ ವಿತರಿ ಸುವ ಬಗ್ಗೆ ಪಡಿತರದಾರರು ಆರೋಪಿಸಿದ್ದು, ಕೂಡಲೇ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ತೆಗೆದುಕೊಳ್ಳುವಂತೆ ಸೂಚಿಸಿದರು.
ಜನತಾ ದರ್ಶನದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ ದಂತೆ ೨೯ ಫಲಾನುಭವಿಗಳಿಗೆ ಸೌಲಭ್ಯಗಳ ಪ್ರಮಾಣ ಪತ್ರ ವಿತರಿ ಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಲವಾರು ಅಹವಾಲುಗಳು ಸಲ್ಲಿಕೆಯಾದವು.
ಸಭೆಯಲ್ಲಿ ಚನ್ನಗಿರಿ ತಹಸೀಲ್ದಾರ್ ಎರ್ರಿಸ್ವಾಮಿ, ತಾಪಂ ಎಡಿ ಜಯರಾಮ್, ತಾಲೂಕು ಮಟ್ಟದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಗ್ರಾಪಂ ಪಿಡಿಒಗಳು ಹಾಜರಿದ್ದರು.