ಶಿವಮೊಗ್ಗ : ನಗರ ಪಾಲಿಕೆ ಆವರಣದಲ್ಲಿ ಶಾಶ್ವತ ಕನ್ನಡ ಧ್ವಜ ಸ್ತಂಭವನ್ನು ಸ್ಥಾಪಿಸಬೇಕು ಎಂದು ಕನ್ನಡಪರ ಹೋರಾಟಗಾರರು ಇಂದು ಆಯುಕ್ತರಿಗೆ ಮನವಿ ಸಲ್ಲಿಸಿದರು.
ಎ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸ ಬೇಕೆಂದು ಸರ್ಕಾರವೇ ಆದೇಶ ಹೊರಡಿಸಿದೆ. ಆದರೆ, ಪಾಲಿಕೆಯಲ್ಲಿ ಕನ್ನಡ ಧ್ವಜವನ್ನು ಒಂದು ಕೋಲಿನ ಮೂಲಕ ಹಾಕಿರುವುದು ಅಗೌರವ ತರುವಂತಾಗಿದೆ. ಕನ್ನಡ ಧ್ವಜ ವರ್ಷಪೂರ್ತಿ ಹಾರಾಡಬೇಕು. ಅದಕ್ಕಾಗಿ ಶಾಶ್ವತವಾದ ಧ್ವಜ ಸ್ತಂಭ ವಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆಯವರು ಧ್ವಜ ಸ್ತಂಭ ನಿರ್ಮಿಸದಿದ್ದರೆ ಕನ್ನಡ ಪರ ಹೋರಾಟಗಾರರೇ ಈ ಕೆಲಸ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಮುಖರಾದ ಮಧುಸೂದನ್ ಎಸ್.ಎಂ., ಎಂ. ರಾಮಪ್ರಸಾದ್, ನೂರು, ನಯಾಜ್, ರಫೀ, ಶರತ್, ಮೊದಲಾದವರಿದ್ದರು.
