ಎತ್ತರದ ನಿಲುವು, ವಿಶಾಲ ವಾದ ಹಣೆ, ಬಾಗಿದ ತಲೆ, ವಿಭೂತಿಧಾರಿ, ಮಾತೃ ಹೃದಯಿ ಈ ಕಾವಿಧಾರಿ. ಇಳಿ ವಯಸ್ಸಿನಲ್ಲಿಯೂ ಬತ್ತದ ಚೈತನ್ಯ. ಅನ್ನ, ಅಕ್ಷರ, eನ ದಾಸೋಹದ ಮೂಲಕ ಸಂದೇಶ ವನ್ನು ನೀಡುತ್ತಿರುವ ಕಾಯಕಯೋಗಿ. ವಿದ್ಯಾರ್ಥಿಗಳ ಒಳಿತಿಗೆ, ಯಶಸ್ಸಿಗಾಗಿ ಸದಾ ಚಿಂತನೆ, ಸೇವೆ-ತ್ಯಾಗವೇ ಜೀವನದ ಧ್ಯೇಯ. ದಿನವೂ ಶ್ರೀಗಳ ದರ್ಶನಕ್ಕೆ ಹರಿದು ಬರುವ ಭಕ್ತರ ಗಣ. ಈ ಕರ್ಮ ಯೋಗಿಯ ದರ್ಶನವೇ ಪುಣ್ಯ.
ಅವರೇ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು.
ಶಿವಣ್ಣ: ಮಾಗಡಿ ತಾಲ್ಲೂಕು ವೀರಾಪುರದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳ ೧೩ನೇ ಮಗನೇ ಶಿವಣ್ಣ. ಶಿವಣ್ಣನಿಗೆ ೮ ಮಂದಿ ಅಣ್ಣಂದಿರು ಮತ್ತು ಐವರು ಅಕ್ಕಂದಿರು. ಕೊನೆಯ ಮಗ ಶಿವಣ್ಣನೆಂದರೆ ತಂದೆ-ತಾಯಿಗೆ ವಿಶೇಷವಾದ ಅಕ್ಕರೆ, ಪ್ರೀತಿ. ಶಿವಣ್ಣನ ವಿದ್ಯಾಭ್ಯಾಸ ವೀರಾಪುರದ ಕೂಲಿ ಮಠದ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಆರಂಭವಾಯಿತು. ಪಾಲನ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ತಾಯಿಯನ್ನು ಕಳೆದುಕೊಂಡ ಶಿವಣ್ಣ, ನಂತರ ಬೆಳೆದಿದ್ದು ಅಕ್ಕನ ಆಶ್ರಯದಲ್ಲಿ.
ಮರುಳಾರಾಧ್ಯರು : ತುಮಕೂರಿನ ಬಳಿಯ ನಾಗವಲ್ಲಿ ಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಸೆಂಟ್ರಲ್ ಕಾಲೇಜಿ ನಲ್ಲಿ ಕಲಿತ ಶಿವಣ್ಣ ವಿದ್ಯಾರ್ಥಿ ಜೀವನದಲ್ಲಿzಗಲೇ ತುಮಕೂರಿನ ಸಿದ್ಧಗಂಗಾ ಮಠಾಧಿಪತಿಗಳಾದ ಶ್ರೀ ಉದ್ಧಾನ ಶಿವಯೋಗಿಗಳು ಹಾಗೂ ಕಿರಿಯ ಶ್ರೀಗಳಾದ ಮರುಳಾರಾಧ್ಯ ರೊಂದಿಗೆ ಸಂಪರ್ಕ ಬೆಳೆಸಿಕೊಂಡಿ ದ್ದರು. ಶಿವಣ್ಣರನ್ನು ಕಂಡರೆ ಉಭಯ ಶ್ರೀಗಳಿಗೂ ಅಚ್ಚುಮೆಚ್ಚು. ಮಠದ ಹಿತ, ಏಳಿಗೆ ಬಗ್ಗೆ ಸದಾ ಚಿಂತಿಸುತ್ತಿದ್ದರು. ಒಮ್ಮೆ ಭೀಕರ ವಾದ ಪ್ಲೇಗ್‌ನಿಂದ ತುಮಕೂರು ತತ್ತರಿಸಿ ಹೋಗಿತ್ತು. ಇಂತಹ ಸಮಯದಲ್ಲಿಯೂ ಶಿವಣ್ಣ ಹಾಗೂ ಮಠದ ಒಡನಾಟ ಎಂದಿನಂತೆ ಮುಂದುವರಿದಿತ್ತು.
ಉದ್ಧಾನ ಶ್ರೀಗಳು: ಶತಮಾನಗಳ ಇತಿಹಾಸವಿರುವ ಸಿದ್ಧಗಂಗಾ ಮಠವನ್ನು ಗೋಪಾಲ ಸಿದ್ಧೇಶ್ವರ ಎಂಬ ಮಹಾನ್ ತಪಸ್ವಿಗಳು ಸ್ಥಾಪಿಸಿದರು. ಅವರ ನಂತರ ನೂರಾರು ತಪಸ್ವಿಗಳು, ಪುಣ್ಯಪುರುಷರು ಮಠವನ್ನು ನಡೆಸುತ್ತಾ ಬಂದರು.
೧೯೩೦ ರಲ್ಲಿ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಲಿಂಗೈಕ್ಯರಾದರು. ಅವರ ಅಂತಿಮ ದರ್ಶನ, ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣರ ಕಡೆಗೆ ಹಿರಿಯ ಶ್ರೀಗಳ ಗಮನ ಹರಿಯಿತು. ಶಿವಣ್ಣರ ಹಿನ್ನೆಲೆ ಬಗ್ಗೆ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೇ ಎಲ್ಲರ ಸಮ್ಮಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು.
ಅಂತಿಮ ವಿಧಿವಿಧಾನಕ್ಕೆ ಬಂದಿದ್ದ ಶಿವಣ್ಣ ಕಾವಿ, ರುದ್ರಾಕ್ಷಿ ಧರಿಸಿ ಶ್ರೀ ಶಿವಕುಮಾರ ಸ್ವಾಮೀಜಿಯಾದರು. ಸನ್ಯಾಸತ್ವದ ನಂತರವೂ ಬೆಂಗಳೂರಿಗೆ ಬಂದು ತಮ್ಮ ಶಿಕ್ಷಣಾಭ್ಯಾಸವನ್ನು ಮುಂದುವರಿಸಿದರು. ಸನ್ಯಾಸತ್ವದ ರೀತಿ-ನೀತಿ ರಿವಾಜುಗಳನ್ನು ಕ್ರಮಬದ್ಧವಾಗಿ ಪಾಲಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾ ದರು. ವಿದ್ಯಾಭ್ಯಾಸದ ನಂತರ ತಮ್ಮ ಸಂಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಟ್ಟರು. ಉದ್ನಾನ ಶ್ರೀಗಳು ಶಿವೈಕ್ಯರಾದ ನಂತರ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಆಡಳಿತ ಶಿವಕುಮಾರ ಶ್ರೀಗಳ ಹೆಗಲೇರಿತು.
ಮನೆ-ಮನೆಯಲ್ಲೂ : ಮಠ ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವಹಿಸಿಕೊಂಡ ಸಂದರ್ಭ ದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಮಠವನ್ನು ನಡೆಸುವುದು ಸುಲಭವಾಗಿರಲಿಲ್ಲ. ಮಳೆರಾಯನ ಕಣ್ಣಾಮುಚ್ಚಾಲೆಯಿಂದ ಬರ ಪರಿಸ್ಥಿತಿಯನ್ನು ಎದುರಿಸಬೇಕಾ ಯಿತು. ಆಗ ಖುದ್ದು ಶ್ರೀಗಳೇ ಭಕ್ತರ ಮನೆಗಳಿಗೆ ನಡೆದುಕೊಂಡು ಹೋಗಿ ದವಸ-ಧಾನ್ಯ ಬೇಡಿ ತಂದರು. ಮಠ, ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ, ಮಠದಲ್ಲಿ ಪಡೆಯ ಬೇಕಾದ ದಿನ ನಿತ್ಯದ ಕಾರ್ಯಕ್ರಮ, ಭಕ್ತರು ಹಾಗೂ ಗಣ್ಯರ ಭೇಟಿ, ಮಠದ ಆರ್ಥಿಕ ನಿರ್ವಹಣೆಯನ್ನು ಹಿರಿಯ ಶ್ರೀಗಳ ಆಣತಿಯಂತೆ ಸಮರ್ಥವಾಗಿ ಶ್ರೀಗಳು ಮುನ್ನಡೆಸುತ್ತಾ ಬಂದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಶಿಕ್ಷಣದ ಮಹತ್ವವನ್ನು ದೇಶದೆಡೆ ಹರಿಸಲು, ಅದರಲ್ಲೂ ಮುಖ್ಯ ವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಲು ಸರ್ಕಾರ ಸೇರಿದಂತೆ ಅನೇಕ ಮಹನೀಯರು ಮುಂದಾದರು. ಆದರೆ ಸಿದ್ಧಗಂಗಾ ಮಠದ ಶಾಲೆಯಲ್ಲಿ ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಮಕ್ಕಳೇ ಕಲಿಯುತ್ತಿ ದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಮೆಚ್ಚುಗೆ ವ್ಯಕ್ತವಾಯಿತು. ತುಮಕೂರು ಶೈಕ್ಷಣಿಕ ಕ್ಷೇತ್ರವೆಂದು ಖ್ಯಾತಿ ಪಡೆಯಿತು. ಕಾಲಕ್ರಮೇಣ ವಿದ್ಯಾರ್ಥಿ ವರ್ಗ, ಭಕ್ತ ವರ್ಗ ದಿನದಿನಕ್ಕೂ ಹೆಚ್ಚಾಗತೊಡಗಿತು.
ದಿನಚರಿ : ಮುಂಜನೆ ೪ಗಂಟೆಗೆ ಏಳುವ ಶ್ರೀಗಳು ಪ್ರಾಣಾಯಾಮ, ಧ್ಯಾನ, ಇಷ್ಟಲಿಂಗ ಪೂಜೆ, ಸ್ವಾಮೀಜಿಗಳ ದರ್ಶನಕ್ಕೆ ಬಂದ ಭಕ್ತರಿಗೆ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ಬೆಳಿಗ್ಗೆ ಆರೂವರೆಗೆ ಒಂದು ಅಕ್ಕಿ ಇಡ್ಲಿ, ಸ್ವಲ್ಪ ಹೆಸರುಬೇಳೆ ತೊವ್ವೆ, ಚಟ್ನಿಯನ್ನು ಬೆಳಗಿನ ಉಪಹಾರ ಸೇವಿಸುತ್ತಿದ್ದರು. ನಂತರ ಎರಡು ತುಂಡು ಸೇಬು ಹಾಗೂ ಬೇವಿನ ಚಕ್ಕೆ ಕಷಾಯವನ್ನು ಕಡ್ಡಾಯವಾಗಿ ಸೇವಿಸುತ್ತಿದ್ದರು. ತಪ್ಪದೇ ದಿನ ಪತ್ರಿಕೆಯನ್ನು ಓದುತ್ತಿದ್ದರು. ಮಠಕ್ಕೆ ಬರುವ ಭಕ್ತರ ಹಾಗೂ ರೈತರ ಕಷ್ಟ-ಸುಖ ಹಾಗೂ ಮಳೆ- ಬೆಳೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರ ವ್ಯವಹಾರಗಳಲ್ಲಿ ತೊಡಗುತ್ತಿದ್ದರು. ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಶ್ರೀಗಳನ್ನು ಭೇಟಿಯಾಗಲು ದಿನವೂ ಭಕ್ತಸಾಗರ ಹರಿದು ಬರುತ್ತಿತ್ತು. ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನಮಂತ್ರಿ ಯವರೆಗೂ ಶ್ರೀಗಳ ದರ್ಶನ ಪಡೆದಿzರೆ. ಬಡವ-ಬಲ್ಲಿದ, ಜತಿ-ಭೇಧ ಮಾಡದೇ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುತ್ತಿತ್ತು ಈ ಮಾತೃ ಹೃದಯಿ.
ಬಿಸಿನೀರು- ತೊಗರಿ ಸಾರು : ಮಧ್ಯಾಹ್ನ ಮಠದಲ್ಲಿ ಪೂಜೆ ಮತ್ತು ಧ್ಯಾನದಲ್ಲಿ ತೊಡಗುತ್ತಿದ್ದರು. ನಂತರ ಒಂದು ಎಳ್ಳೇಕಾಯಿ ಗಾತ್ರದ ಮುz, ಸ್ವಲ್ಪ ಅನ್ನ, ತೊಗರಿಬೇಳೆ ಸಾಂಬಾರನ್ನು ಭೋಜನವಾಗಿ ಸ್ವೀಕರಿಸುತ್ತಿದ್ದರು. ಸಂಜೆ ೪ರ ನಂತರ ಭಕ್ತರ ಭೇಟಿ, ವಿದ್ಯಾರ್ಥಿಗಳ ಯೋಗಕ್ಷೇಮ, ದಾಸೋಹದ ಮಾಹಿತಿಗಳು ಹಾಗೂ ಮಠದ ವಿಚಾರದ ಬಗ್ಗೆ ಚರ್ಚಿಸುತ್ತಿದ್ದರು.
ಹಳೆಯ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ರಾತ್ರಿ ಪೂಜೆಯ ನಂತರ ಲಘು ಉಪಹಾರದೊಂದಿಗೆ ಹಣ್ಣನ್ನು ಸೇವಿಸುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಸಭಾಂಗಣದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದ ಒಂದು ದೃಶ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾರ್ಯಕ್ರಮಕ್ಕೆ ವಿರಾಮ ಹಾಕುತ್ತಾರೆ. ಪ್ರಸಾದ ಸ್ವೀಕರೀಸುವ ವೇಳೆ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ವೇಳೆಯಲ್ಲಿ ಏನನ್ನೂ ಸೇವಿಸುವುದಿಲ್ಲ. ಕಳೆದ ಎಂಟು ದಶಕಗಳಿಂದ ಶ್ರೀಗಳ ದಿನಚರಿ ಇದೇ ರೀತಿ ಸಾಗಿತ್ತು.
ಕನ್ನಡದ ರತ್ನ : ಓದಿನೊಂದಿಗೆ ಆರಂಭವಾಗವ ಶ್ರೀಗಳ ದಿನಚರಿ ಓದಿನೊಂದಿಗೆ ಮುಕ್ತಾಯ ವಾಗುತ್ತಿತ್ತು. ದಿನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಹಿಸುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಸ್ವಾಮೀಜಿಗಳು ಭೇಟಿ ನೀಡುತ್ತಿದ್ದರು. ಸ್ವಾಮೀಜಿಗಳ ಜತ್ಯಾತೀತ ಮನೋಭಾವ, ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಜೀವಮಾನ ಸಾಧನೆ ಗಾಗಿ ಅವರ ೧೦೦ನೇ ಹುಟ್ಟು ಹಬ್ಬದಂದು ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೫ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂದೂ ಹೆಸರಾಗಿದೆ. ಈ ಪವಿತ್ರ ಗಂಗೆಯು ಎ ಬಗೆಯ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇಂದು ಇಲ್ಲಿಗೆ ಬರುವ ಎ ಜತಿ, ಧರ್ಮ, ಸಮುದಾಯದ ಹಂಗಿಲ್ಲದೇ ಸಾವಿರಾರು ಭಕ್ತರು ಈ ನೀರನ್ನು ಬಳಸುತ್ತಾರೆ.
ಶ್ರೀ ಮಠದ ಶಾಖಾ ಮಠಗಳು :
ಕಂಬಾಳು ಮರುಳಸಿದ್ದರ ಮಠ, ಕಂಚುಗಲ್ ಬಂಡೆ ಮಠ, ಚಿಲುಮೆ ಮಠ, ಬಸವಾಪಟ್ಟಣದ ಬೋಳ ಬಸವೇಶ್ವರ ಸ್ವಾಮಿ ಕ್ಷೇತ್ರ, ಮಸ್ಕಲ್ ಮಠ, ಸೋಲೂರಿನ ಮೂರು-ನಾಲ್ಕು ಮಠಗಳು, ಮಹಂತೇಶ್ವರ ಸ್ವಾಮಿಗದ್ದಿಗೆ ಮಠ, ತೋಪಿನಮಠ, ಕಣ್ಣೂರು ಮಠ, ತಿಪ್ಪಸಂದ್ರದ ಮಠ, ಹರ್ತಿದುರ್ಗ ಸಾವನದುರ್ಗದ ಮಠ, ಬೆಳ್ಳಾವೆಯ ರುದ್ರಮಠ, ದೇಶ ಮಠ, ಮೂಲೆಮಠ, ದೇವರಾಯಣಪಟ್ಟಣದ ಮಠ, ಸಿದ್ದರಬೆಟ್ಟದ ಗದ್ದುಗೆ, ಬೆಟ್ಟದ ಹಳ್ಳಿ, ಚಕ್ರಭಾವಿ, ಹಿತ್ತಲಹಳ್ಳಿ, ಅಂಕನಹಳ್ಳಿ ಮಠ, ಹುಲಿಯೂರು ದುರ್ಗದ ಮಠ, ಕಗ್ಗೆರೆ ವಿರುಪಸಂದ್ರ ತಾವರೆಕೆರೆಮಠ, ನೊಣವಿನಕೆರೆ, ಗೋಡೆಗೆರೆ, ಎಳನಡು, ಕಟ್ಟಿಗೆನಹಳ್ಳಿ, ಗವಿಮಠ ಸೇರಿ ಹಲವು ಮಠಗಳು ಸಿದ್ದಗಂಗಾ ಮಠದ ಶಾಖಾ ಮಠಗಳಾಗಿವೆ.
ಇಂತಹ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಗಳು ೨೦೧೯ ರ ಜನವರಿ ೨೧ ರಂದು ತಮ್ಮ ದೇಹತ್ಯಾಗ ಮಾಡಿದರು. ಈಗ ಶ್ರೀ ಸಿದ್ಧಗಂಗಾ ಮಠವನ್ನು ಡಾ. ಶಿವಕುಮಾರ ಸ್ವಾಮಿಗಳ ನಂತರ ಅವರ ಉತ್ತರಾಧಿಕಾರಿ ಗಳಾಗಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಗಳು ಮಠವನ್ನು ಮುನ್ನಡೆಸುತ್ತಿ zರೆ. ಶ್ರೀ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ನಂತರ, ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಕಾಲ ಘಟ್ಟದಲ್ಲಿ ನಾವಿದ್ದೇವೆ ಎನ್ನುವುದು ಮಹಾಪುಣ್ಯವೇ ಸರಿ.
- ಮುರುಳೀಧರ್ ಹೆಚ್ ಸಿ ಪತ್ರಕರ್ತರು, ಶಿವಮೆಗ್ಗ . ದೂ.೭೮೯೨೧೫೧೨೨೮