ಸಾಗರ : ತಾಲ್ಲೂಕಿನ ಬಾರಂಗಿ ಹೋಬಳಿ ಬಿಳಿಗಾರುವಿನಲ್ಲಿ ಖಾತೆ ಜಾಗದಲ್ಲಿದ್ದ ಅಡಿಕೆ, ಬಾಳೆ ಬೆಳೆಗಳನ್ನು ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಿತ್ತೆಸೆದು ದೌರ್ಜನ್ಯ ಎಸಗಿzರೆ ಎಂದು ಈರಮ್ಮ ಕೋಂ ಚಿಂತಾಮಣಿ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾನ್ಕುಳಿ ಗ್ರಾಮದ ಸರ್ವೆ ನಂ. ೫೩/೧ರ ಖಾತೆ ಜಾಗದಲ್ಲಿ ಬೆಳೆದಿದ್ದ ಸುಮಾರು ೪೦ ಅಡಿಕೆ ಸಸಿಗಳನ್ನು ಬಾಳೆ ಬೆಳೆಗಳನ್ನು ಅಕ್ರಮ ಪ್ರವೇಶ ಮಾಡಿ ಅರಣ್ಯ ಫಾರೆಸ್ಟರ್, ಗಾರ್ಡ್ ಮತ್ತು ವಾಚರ್ ಕಿತ್ತು ನಾಶ ಮಾಡಿzರೆ. ಇವರ ವಿರುದ್ಧ ಇಲಾಖೆಯ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.
೧೯೫೯ರಿಂದಲೂ ನಮ್ಮ ಮಾವನ ಕಾಲದಿಂದಲೂ ಇಲ್ಲಿ ೧ ಎಕರೆ ಖಾತೆ ಜಮೀನು ಇದೆ. ಇದರಲ್ಲಿ ಒಂದು ಮನೆ ಕಟ್ಟಿಕೊಂಡು ಉಳಿದ ಜಗದಲ್ಲಿ ಕೃಷಿ ಮಾಡಿ ಕೊಂಡು ಜೀವನ ಮಾಡುತ್ತಿದ್ದೇವೆ. ಜಮೀನಿಗೆ ಸಂಬಂಧಿಸಿದ ಪಹಣಿ ಇದೆ. ನಮ್ಮ ಹಕ್ಕಿನಲ್ಲಿರುವ ಕಂದಾಯ ಭೂಮಿಯಲ್ಲಿ ಅತಿಕ್ರಮಣ ಮಾಡಿ ದೌರ್ಜನ್ಯ ಎಸಗಿ ನಮಗೆ ನಷ್ಟ ಉಂಟು ಮಾಡಿzರೆ. ನಮ್ಮ ಕುಟುಂಬದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿzರೆ.
ಈ ಬಗ್ಗೆ ಶಾಸಕರು ಗಮನ ಹರಿಸಬೇಕು. ದೌರ್ಜನ್ಯ ಎಸಗಿದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪಾರ್ಶ್ವ ನಾಥ, ಪುಷ್ಪಾವತಿ ಹಾಜರಿದ್ದರು.
