ಅಕ್ರಮ ಮರಳುಗಾರಿಕೆ ಮೇಲೆ ಎಸಿ- ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ…

ಶಿವಮೊಗ್ಗ : ತಾಲ್ಲೂಕಿನ ಹೊಳಲೂರು ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ತುಂಗಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಾರಿಕೆ ಮೇಲೆ ಉಪವಿಭಾಧಿಕಾರಿ ಸತ್ಯನಾರಾಯಣ್, ತಹಶೀಲ್ದಾರ್ ವಿ.ಎಸ್.ರಾಜೀವ್ ನೇತೃತ್ವದಲ್ಲಿ. ಮತ್ತು ಗಣಿ ಭೂ ವಿeನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ೫೦ ಟನ್ ಮರಳು ಸೇರಿದಂತೆ ಅಕ್ರಮ ಮರಳುಗಾರಿಕೆಗೆ ಬಳಸಿದ ಕೆಲವು ಸಲಕರಣೆಗಳನ್ನು ವಶಕ್ಕೆ ಪಡೆದಿzರೆ.
ದಾಳಿ ಮಾಹಿತಿ ತಿಳಿದ ಅಕ್ರಮ ಮರಳು ದಂಧೆಕೊರರು ಸ್ಥಳದಿಂದ ಪರಾರಿಯಾಗಿದ್ದರು. ಸಾರ್ವ ಜನಿಕರ ದೂರಿನ ಹಿನ್ನೆಲೆ ಯಲ್ಲಿ ಖಡಕ್ ದಾಳಿ ನಡೆಸಲಾಗಿದ್ದು ಹೀಗೆ ಮರಳು ಗಣಿಗಾರಿಕೆ ಮುಂದುವರೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿzರೆ.
ಅಕ್ರಮ ಮರಳುಗಾರಿಕೆಗೆ ಬಳಸಿದಂತಹ ಕೆಲವೊಂದು ಸಲಕರಣೆಗಳನ್ನು ವಶಕ್ಕೆ ಪಡೆದು ಪೋಲಿಸ್ ಇಲಾಖೆಗೆ ಹಸ್ತಾಂತರಿಸಿ ಈ ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕ್ಕೆ ಕೈಗೊಳ್ಳು ಪೋಲಿಸ್ ಇಲಾಖೆಗೆ ಸೂಚಿಸಲಾಯಿತು. ಈ ಹಿಂದೆಯೂ ಸಹ ತಹಶೀಲ್ದಾರ್ .ವಿ. ಎಸ್. ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರಿಗೆ ಖಡಕ್ ಎಚ್ಚರಿಕೆ ನೀಡಿ ಅಕ್ರಮ ಮರಳನ್ನ ವಶಪಡಿಸಿ ಪಿಡಬ್ಯೂ ಇಲಾಖೆಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *