ರಾಜ್ಯ ಮಾಜಿ ಶಾಸಕರ ವೇದಿಕೆಯ ಮನವಿಗೆ ಸ್ಪಂದಿಸಿದ ಸರ್ಕಾರ…

ಶಿವಮೊಗ್ಗ : ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯು ರಾಜ್ಯ ಸರ್ಕಾರಕ್ಕೆ ಮಾಡಿದ ವಿವಿಧ ಬೇಡಿಕೆಗಳ ಮನವಿಗೆ ಈ ಬಾರಿಯ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಎಂದು ಮಾಜಿ ಶಾಸಕರಾದ ಹೆಚ್.ಎಂ. ಚಂದ್ರಶೇಖರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಈ ಬಾರಿಯ ಬಜೆಟ್ ನಲ್ಲಿ ಪ್ರಮುಖವಾಗಿ ಮಾಜಿ ಶಾಸಕರ ಪಿಂಚಣಿಯನ್ನು ಮಾಸಿಕ ರೂ.೫೦ ರಿಂದ ೭೫ ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಮಾಜಿ ಶಾಸಕರ ಆರೋಗ್ಯ ಭತ್ಯೆಯನ್ನು ಮಾಸಿಕ ರೂ.೫ ರಿಂದ ೨೦ ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ರೂ.೫೫ ಸಾವಿರದಿಂದ ೯೫ ಸಾವಿರಕ್ಕೆ ಆರ್ಥಿಕ ಸೌಲಭ್ಯ ಹೆಚ್ಚಾಗಿದೆ. ಇದಲ್ಲದೆ ಹೆಚ್ಚುವರಿ ರೂ.೧ ಲಕ್ಷ ರೈಲ್ವೆ ಪ್ರಯಾಣದರ ನೀಡಲಾಗಿದೆ ಎಂದರು.


ಮೃತಪಟ್ಟ ಮಾಜಿ ಶಾಸಕರ ಪತ್ನಿಯರಿಗೂ ಶೇ.೫೦ರಷ್ಟು ಪಿಂಚಣಿ ಸಿಗುತ್ತಿದ್ದು, ಅವರಿಗೆ ರೂ.೩೭,೫೦೦ ಮಾಸಿಕ ಪಿಂಚಣಿ ಹಾಗೂ ರೂ.೧೦ ಸಾವಿರ ವೈದ್ಯಕೀಯ ವೆಚ್ಚಸಿಗುವುದು. ಇದರಿಂದ ಒಟ್ಟಾರೆ ರೂ.೪೭,೫೦೦ ಮಾಸಿಕ ಆರ್ಥಿಕ ಸೌಲಭ್ಯ ಸಿಗುವುದು. ಪ್ರಸ್ತುತ ವಿವಿಧ ಪಕ್ಷಗಳ ೪೩೫ ಮಾಜಿ ಶಾಸಕರು ಹಾಗೂ ೨೩೭ ಮಂದಿ ವಿಧವಾ ಪತ್ನಿಯರಿಗೆ ಈ ವೇತನ ಹೆಚ್ಚಳದಿಂದ ಅನುಕೂಲವಾಗಲಿದೆ ಎಂದರು.
ಮಾಜಿ ಶಾಸಕರ ಪೈಕಿ ಹಿಂದಿನ ಬಹುತೇಕರು ಆರ್ಥಿಕ ಸಂಕಷ್ಟದಲ್ಲಿzರೆ. ವzಪ್ಯದಲ್ಲಿ ಅನೇಕರಿಗೆ ಚಿಕಿತ್ಸೆಗೂ ಹಣವಿಲ್ಲದ ಪರಿಸ್ಥಿತಿ ಇದೆ. ಮತಪಟ್ಟ ಮಾಜಿ ಶಾಸಕರ ಪತ್ನಿಯರ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಸ್ವಂತ ಮನೆ ಕಟ್ಟಿಕೊಳ್ಳದವರೂ ಇzರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಿಕೊಟ್ಟಿರುವುದು ಹೆಚ್ಚು ಅನುಕೂಲವಾಗಿದೆ ಎಂದರು.
ವೇದಿಕೆಯ ಸತತ ಪ್ರಯತ್ನದಿಂದ ಮಾಜಿ ಶಾಸಕರ ಈ ಬೇಡಿಕೆ ಈಡೇರಿದ್ದು, ಪ್ರಮುಖವಾಗಿ ಈ ಬೇಡಿಕೆ ಈಡೇರಲು ಕಾರಣರಾದ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ, ರಾಜ್ಯ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಇವರಿಗೆ ವೇದಿಕೆ ಕತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಕುಮಾರಸ್ವಾಮಿ ಮಾತನಾಡಿ, ವೇದಿಕೆಯು ಕೆಲ ವರ್ಷಗಳಿಂದ ಮಾಡುತ್ತಿರುವ ಮನವಿ ಹಾಗೂ ಸರ್ಕಾರದ ಮೇಲೆ ಹಾಕುತ್ತಿದ್ದ ಒತ್ತಡಕ್ಕೆ ಮಣಿದು ಈ ಬೇಡಿಕೆಗಳ ಈಡೇರಿಸಿದೆ. ಇದರಿಂದ ರಾಜ್ಯದ ಮಾಜಿ ಸಚಿವರು, ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನ ಎ ಮಾಜಿ ಶಾಸಕರಿಗೆ ಹಾಗೂ ಅವರ ಕುಟುಂಬಕ್ಕೆ ಅನುಕೂಲವಾಗಿದೆ ಎಂದರು.

Leave a Reply

Your email address will not be published. Required fields are marked *