ಸಂವಿಧಾನ ರಕ್ಷಿಸಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ…

ಶಿವಮೊಗ್ಗ : ಸಂವಿಧಾನವನ್ನು ರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿ ದರು.
ಅವರು ಇಂದು ಡಾ. ಅಂಬೇಡ್ಕರ್ ಭವನದಲ್ಲಿ ಜಿ ಕಾಂಗ್ರೆಸ್ಸಿನ ಹಿಂದುಳಿದ ವರ್ಗ, ಪ.ಜ., ಪ.ಪಂ.ಅಲ್ಪಸಂಖ್ಯಾತರ ವಿಭಾಗಗಳ ವತಿಯಿಂದ ಆಯೋಜಿ ಸಿದ್ದ ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸ್ವಾತಂತ್ರ್ಯ ಬಂದಿದೆ. ಸಂವಿ ಧಾನವೂ ರಚನೆಯಾಗಿದೆ. ಆದರೆ ನಮ್ಮ ಸಂವಿಧಾನವನ್ನು ನಾವೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಗೋಡ್ಸೆ ಪೂಜೆ ನಡೆ ಯುವ ಈ ಹೊತ್ತಿನಲ್ಲಿ ಡಾ. ಅಂಬೇಡ್ಕರ್ ಮರೆಯಾಗುತ್ತಿ zರೆ. ನಮ್ಮ ತಂದೆ-ತಾಯಿ, ಗುರು ಎಲ್ಲ ಸ್ಥಾನದಲ್ಲಿರುವ ಸಂವಿಧಾನ ವನ್ನೇ ತಿದ್ದುಪಡಿ ಮಾಡಲು ಹೊರಟಿ zರೆ. ಹಾಗಾಗಿ ಪವಿತ್ರ ಸಂವಿಧಾನ ವನ್ನು ಅಪವಿತ್ರ ಗೊಳಿಸುವ ಮೊದ ಲೇ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡಿ ದೆ. ಸಂವಿಧಾನದ ರಕ್ಷಣೆ ನಮ್ಮ ಹೊಣೆ ಎಂದುಕೊಂಡಿzವೆ. ಈ ಹಿನ್ನೆಲೆ ಯಲ್ಲಿ ಸಂವಿಧಾನ ರಕ್ಷಕ್ ಅಭಿಯಾನ ರಾಜ್ಯದೆಡೆ ನಡೆಯು ತ್ತಿದ್ದು ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದಲ್ಲಿಯೂ ಕೂಡ ಇದು ನಡೆಯಬೇಕು. ಒಟ್ಟಾರೆ ಸಂವಿಧಾ ನದ ಉಳಿವಿನ ಜಾಗೃತಿ ಕಾರ್ಯ ಕ್ರಮ ನಡೆಯಬೇಕು ಎಂದರು.


ಶಾಲಾ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನದ ಓದನ್ನು ಕಡ್ಡಾಯ ಗೊಳಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಹಲವು ಶಾಲೆಗಳು ಇದನ್ನು ಪಾಲಿಸುತ್ತಿವೆ. ಪಾಲಿಸದೆ ಇರುವ ಶಾಲೆಗಳೂ ಸಂವಿಧಾನ ಓದಿನ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದರು.
ಪಠ್ಯ ಪುಸ್ತಕಗಳಲ್ಲಿ ಕೇಸರಿಕರಣ ವಾಗಿದ್ದನ್ನು ನಾನು ಸಚಿವನಾದ ತಕ್ಷಣ ತೆಗೆದು ಹಾಕಿzನೆ. ಸಂವಿಧಾನದ ಪ್ರಕಾರ ನಾವೆಲ್ಲರೂ ಒಂದೇ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹಲವು ಕಾರ್ಯಕ್ರಮ ಗಳನ್ನು ಕೈಗೊಂಡಿದೆ. ನಮ್ಮ ಗ್ಯಾರೆಂಟಿ ಯೋಜನೆಗಳೂ ಈಗಾ ಗಲೆ ಯಶಸ್ವಿಯಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ನಮ್ಮ ಸಂವಿಧಾನವನ್ನು ಅಂಬೇಡ್ಕರ್ ಸೇರಿದಂತೆ ಎಲ್ಲ ಸದಸ್ಯರು ಅಧ್ಯಯನ ಮಾಡಿ ರಚಿಸಿzರೆ. ಭಾರತದ ಸಂವಿಧಾನವೇ ಶ್ರೇಷ್ಠ ಎಂದು ಜಗತ್ತಿನಲ್ಲಿಯೇ ಹೆಸರಾ ಗಿದೆ. ಆದರೆ ಇಂಥಹ ಸಂವಿಧಾನ ವನ್ನು ಈಗ ಅವಮಾನಿಸಲಾಗು ತ್ತಿದ್ದು, ಸಂವಿಧಾನಕ್ಕೆ ಅವಮಾನ ಮಾಡುವವರ ವಿರುದ್ಧ ಕಾಂಗ್ರೆಸ್ ಪಕ್ಷ ಎಂದೂ ಸುಮ್ಮನಿರುವುದಿಲ್ಲ. ಹಾಗಾಗಿಯೇ ಇಂಥಹ ಅಭಿಯಾನ ಗಳು ನಡೆಯುತ್ತಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾ ಡಿದ ಜಿ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೇಂದ್ರದ ಗೃಹ ಮಂತ್ರಿ ಸೇರಿದಂತೆ ಹಲ ಬಿಜೆಪಿ ನಾಯಕರು ಡಾ. ಅಂಬೇ ಡ್ಕರ್ ಅವರಿಗೆ ಅವಮಾನ ಮಾಡು ವುದರ ಜೊತೆಗೆ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿ zರೆ. ಮನು ಸಂವಿಧಾನ ರಚಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಅವಕಾಶ ನೀಡುವುದಲ್ಲ ಎಂದರು.


ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಜಿ. ವೆಂಕಟೇಶ್ ಅವರು, ಮನುಷ್ಯನನ್ನು ಉತ್ತಮ ಮನುಷ್ಯ ನನ್ನಾಗಿಸುವುದೇ ಸಂವಿಧಾನದ ಮುಖ್ಯ ಉzಶ ಎಂದರಲ್ಲದೇ, ಸಂವಿಧಾನ ಎಂದಿಗೂ ಕೆಡುಕು ಉಂಟು ಮಾಡುವುದಿಲ್ಲ. ಆದರೆ ಅದನ್ನು ಮ ನುಷ್ಯರಾದ ನಾವು ಗೌರವಿಸ ಬೇಕು. ಸ್ವಾತಂತ್ರ್ಯ ಸಮಾನತೆ ಮಾತೃತ್ವದ ಮುಖ್ಯ ತತ್ವಗಳು ಇಲ್ಲಿವೆ. ಸಂವಿಧಾ ನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ. ಆರ್. ಅಂಬೇಡ್ಕರ್ ಭಾರತ ದೇಶಕ್ಕೆ ಒಂದು ಉತ್ತಮ ಸಂವಿಧಾನ ವನ್ನು ನೀಡಿzರೆ. ಇದು ಮನುಷ್ಯ ರ ಮಾನವಿಯತೆಯನ್ನು ಪ್ರತಿಬಿಂ ಬಿಸುವ ಸ್ವರೂಪವು ಆಗಿದೆ ಎಂದರು.
ಸಂವಿಧಾನವನ್ನು ಸಂವಿಧಾ ನವೇ ರಕ್ಷಣೆ ಮಾಡಿಕೊಳ್ಳುತ್ತದೆ. ಮೂಲಭೂತ ಉzಶಗಳಿಗೆ ಯಾವುದೇ ಚ್ಯುತಿಯಾಗದಂತೆ ಸಂವಿಧಾನವನ್ನು ಬದಲಾವಣೆ ಮಾಡಬಹುದಾಗಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಅದರ ಮುಖ್ಯ ಉzಶಗಳನ್ನ ತಿಳಿಸಲಾಗಿದೆ. ೩೯೫ ವಿಧಿಗಳಿದ್ದು ಈಗ ಅದು ತಿದ್ದುಪಡಿ ಯ ಮೂಲಕ ೪೪೨ ವಿಧಿಗಳಾಗಿವೆ. ಆರಂಭದಲ್ಲಿ ೮ ಷಡ್ಯುಲ್‌ಗಳಿದ್ದು, ಈಗ ೧೨ ಷಡ್ಯುಲ್‌ಗಳಲಿವೆ. ಜಗತ್ತಿನಲ್ಲಿ ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಂವಿಧಾನದ ರಕ್ಷಣೆಯೂ ಕೂಡ ನಮ್ಮದೇ ಅಗಿದೆ ಎಂದರು.


ಕಾರ್‍ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಶಾ, ಶಿವಕುಮಾರ್, ರವಿಕು ಮಾರ್, ಎಸ್.ಪಿ.ಶೇಷಾದ್ರಿ, ಎಚ್.ಸಿ.ಯೋಗೀಶ್, ರಮೇಶ್ ಶಂಕರಘಟ್ಟ, ಸಿ.ಎಸ್.ಚಂದ್ರಭೂ ಪಾಲ್, ರಮೇಶ್ ಇಕ್ಕೇರಿ, ಜಿ.ಡಿ. ಮಂಜುನಾಥ್, ಉಮಾಪತಿ, ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ಹರ್ಷಿತ್ ಗೌಡ, ನಗರದ ಮಹಾದೇವಪ್ಪ, ಮಂಜುನಾಥ ಬಾಬು, ವಿಜಯಲಕ್ಷ್ಮೀ ಪಾಟೀಲ್, ಎಚ್. ಎಮ್. ಮಧು, ಶಿಜು ಪಾಶಾ, ಪದ್ಮನಾಭ ಇನ್ನಿತರರಿದ್ದರು.