ಶಿವಮೊಗ್ಗ : ತಾಲ್ಲೂಕುಗಳಲ್ಲಿ ಕೆಎಫ್ಡಿ ಪ್ರಕರಣಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಕೆಎಫ್ಡಿ ಕುರಿತು ಜನರಲ್ಲಿರುವ ಭಯ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಗೃತಿ ಮೂಡಿಸಬೇಕೆಂದು ತಹಶೀಲ್ದಾರ್ ವಿ.ಎಸ್.ರಾಜೀವ್ ಸಲಹೆ ನೀಡಿದರು.
ಬುಧವಾರ ಶಿವಮೊಗ್ಗ ತಹ ಶೀಲ್ದಾರ್ ಕಚೇರಿಯ ಸಭಾಂಗಣ ದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

ಜಿಯ ತೀರ್ಥಹಳ್ಳಿ, ಹೊಸನಗರ, ಸಾಗರದ ಭಾಗದಲ್ಲಿ ಪ್ರಕರಣಗಳು ಕಂಡು ಬರುತ್ತಿದ್ದು, ಇದರಿಂದ ಜನರು ಭಯಭೀತರಾ ಗಿzರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಜನರನ್ನು ಭಯಮುಕ್ತಗೊಳಿಸಬೇಕು. ಜೊತೆಗೆ ರೋಗ ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಬೇಕು. ಹೆಚ್ಚು ಜನ ಸಂದಣಿ ಹೊಂದಿರುವುದು ಸ್ಥಳದಲ್ಲಿ ಕರ ಪತ್ರಗಳು, ಪ್ರಕಟಣೆಗಳು, ಭಿತ್ತಿಚಿತ್ರ ಗಳ ಮೂಲಕ ಕೆಎಫ್ಡಿ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು.
ಮಂಗನ ಸಾವಿನಿಂದ ಈ ಕಾಯಿಲೆ ಹರಡಲಿದ್ದು, ತಾಲ್ಲೂಕಿನ ಯಾವುದೇ ಭಾಗದಲ್ಲಿ ಮಂಗನ ಸಾವಾದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅರಣ್ಯ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ವಿಲೇವಾರಿ ಮಾಡು ತ್ತದೆ. ಈ ಕಾಯಿಲೆ ಹೆಚ್ಚಾಗಿ ಕಾಡಿನಲ್ಲಿ ಕಂಡುಬರುವುದರಿಂದ ಕಾಡಿನ ಕಡೆ ಹೋಗುವುದನ್ನು ಜನರು ಕಡಿಮೆ ಮಾಡಬೇಕು.
ಡೆಂಗ್ಯೂ ಪ್ರಕರಣ ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಪಂಚಾಯಿತಿಗಳು ಮುನ್ನೆಚರಿಕೆ ಕ್ರಮ ವಹಿಸಬೇಕು. ೨೦೨೪ ರಲ್ಲಿ ತಾಲ್ಲೂಕಿನಲ್ಲಿ ಒಟ್ಟು ೨೬೮ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಗ್ರಾಮೀಣ ಭಾಗದಲ್ಲಿ ೭೭, ನಗರದ ಭಾಗದಲ್ಲಿ ೧೯೧ ಪ್ರಕರಣಗಳು ದಾಖಲಾಗಿದೆ. ಈ ವರ್ಷ ಜನವರಿಯಲ್ಲಿ ಗ್ರಾಮಿ ಣ ಭಾಗದಲ್ಲಿ ೬ ಪ್ರಕರಣಗಳು ಕಂಡು ಬಂದಿದೆ. ಇದರ ಬಗ್ಗೆ ನಾವೆಲ್ಲರೂ ಈಗಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಗತೆಯಿಂದ ಇದ್ದು ಶುಚಿತ್ವವನ್ನು ಕಾಪಾಡಬೇಕು ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ದಢಾರ ಮತ್ತು ರುಬೆ ಕಾರ್ಯ ಕ್ರಮದಡಿಯಲ್ಲಿ ಈಗಾಗಲೇ ಜಿಯಾದ್ಯಂತ ಲಸಿಕೆ ನೀಡಲಾಗು ತ್ತಿದೆ. ತಾಲ್ಲೂಕಿನ ಆರೋಗ್ಯ ಉಪ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಾ ಗುತ್ತಿದೆ. ಎಮ್ಆರ್ ೧ ಲಸಿಕೆಯನ್ನು ೯ ರಿಂದ ೧೧ ತಿಂಗಳಿನ ಮಕ್ಕಳಿಗೆ ಮತ್ತು ಎಮ್ ಆರ್ ೨ ಲಸಿಕೆಯನ್ನು ೧೬ ರಿಂದ ೨೪ ತಿಂಗಳಿನ ಮಕ್ಕಳಿಗೆ ನೀಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಮಕ್ಕಳನ್ನೂ ಗುರುತಿಸಿ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ತಾಲ್ಲೂಕಿನಲ್ಲಿ ೨೦೨೪ ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ೧೧೨೪ ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ. ರೇಬಿಸ್ ಕೇವಲ ನಾಯಿ ಕಡಿತ ದಿಂದ ಮಾತ್ರವಲ್ಲದೆ ಬೆಕ್ಕಿನಿಂದಲೂ ಬರುತ್ತದೆ. ನಾಯಿ ಕಡಿದ ತಕ್ಷಣ ಕಡಿದ ಜಗವನ್ನು ಹರಿಯುವ ನೀರಿನಿಂದ ಹಾಗೂ ಡೆಟಾಲ್ ನಿಂದ ತೊಳೆಯಬೇಕು. ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಬೇಕು ಎಂದರು.
ತಾಲ್ಲೂಕಿನಲ್ಲಿ ೩೩ ಟೈಫಾಯ್ಡ್ ಪ್ರಕರಣ ದಾಖಲಾಗಿದ್ದು, ಶುದ್ದ ನೀರನ್ನು ಉಪಯೋಗಿಸಬೇಕು. ಹೊರಗಿನ ಯಾವುದೇ ಆಹಾರ ವನ್ನು ತಿನ್ನಬಾರದು. ಬೀದಿಬದಿ ವ್ಯಾಪಾರಿಗಳಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಬೇಕು.
ತಂಬಾಕು ಮುಕ್ತ ಯುವ ಅಭಿ ಯಾನವನ್ನು ಕೈಗೊಳ್ಳಲಾಗುತ್ತಿದ್ದು ತ್ರೈಮಾಸಿಕದಲ್ಲಿ ಕೋಟ್ಪಾ ಕಾಯ್ದೆ ಅಡಿಯಲ್ಲಿ ೧೯ ದಾಳಿಗಳು, ೪೨೪ ಪ್ರಕರಣಗಳು ಹಾಗೂ ರೂ, ೩೯,೭೭೦ ದಂಡವನ್ನು ಸಂಗ್ರಹಿಸಲಾ ಗಿದೆ. ಪ್ರತಿ ಶಾಲಾ-ಕಾಲೇಜುಗಳ ೧೦೦ ಮೀ ಸುತ್ತಮುತ್ತದ ಅಂಗಡಿ ಯಲ್ಲಿ ದಾಳಿ ನಡೆಸಲಾಗುತ್ತಿದೆ. ಕೋಟ್ಪಾ ಕಾಯ್ದೆ ಕುರಿತು ಜಥಾ ಮೂಲಕ ಅರಿವು ಮೂಡಿಸಲಾಗು ತ್ತಿದೆ. ಆರ್ಬಿಎಸ್ಕೆ ಕಾರ್ಯಕ್ರಮ ದಡಿಯಲ್ಲಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ತಪಾಸಣೆ ಕೈಗೊಳ್ಳುತ್ತಿದ್ದು ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಸಿಡಿಪಿಓ ಸಿ. ಗಂಗಾಬಾಯಿ ಮಾತನಾಡಿ, ನಗರದ ಪ್ರದೇಶದಲ್ಲಿ ಅಂಗವಾಡಿ ಕಟ್ಟಡದ ಸಮಸ್ಯೆ ಕುರಿತು ಮಾಹಿತಿ ತಿಳಿಸಿದರು. ಒಟ್ಟು ೧೬೩ ಅಂಗನವಾಡಿಗಳಿದ್ದು, ಅದರಲ್ಲಿ ೬೪ ಸ್ವಂತ ಕಟ್ಟಡಗಳಲ್ಲಿವೆ, ೧೧ ನಿವೇಶನಗಳನ್ನು ಗುರುತಿಸ ಲಾಗಿದೆ. ಇನ್ನೂ ೮೮ ಕೇಂದ್ರಗಳಿಗೆ ನಿವೇಶನ ಬೇಕು. ನಿವೇಶನ ಒದಗಿ ಸುವ ಮೂಲಕ ಅನುಕೂಲ ಮಾಡಿ ಕೊಡಬೇಕೆಂದು ತಹಶೀಲ್ದಾರ್ರ ಬಳಿ ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕಿನ ಕಾರ್ಯನಿರ್ವಾಹ ಅಧಿಕಾರಿ ಅವಿನಾಶ್, ಮಹಾನಗರ ಪಾಲಿಕೆ ಯ ಕಂದಾಯ ಉಪ ಆಯುಕ್ತ ರಾದ ಮಂಜುನಾಥ್, ಪಶು ಆಸ್ಪತ್ರೆಯ ವೈದ್ಯರು ಹಾಜರಿದ್ದರು.