ನಿರಂತರ ಕಲಿಕೆಯ ಮೂಲಕ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ…

ಶಿವಮೊಗ್ಗ : ಇಂದಿನ ತಂತ್ರeನ ಯುಗದಲ್ಲಿ ನಿರಂತರ ಕಲಿಕೆಯ ಮೂಲಕ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಹೋಟ್ ಕರೆ ನೀಡಿದರು.
ಶಂಕರಘಟ್ಟದ ಕುವೆಂಪು ವಿವಿ ೩೪ನೇ ವಾರ್ಷಿಕ ಘಟಿಕೋತ್ಸವದಲ್ಲಿಂದು ಪದವಿ ಪ್ರದಾನ ಮಾಡಿ, ಎಲ್ಲರಿಗೂ ನಮಸ್ಕಾರ. ನಾನು ನಿಮ್ಮೆಲರನ್ನು ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ನೆರೆದಿದ್ದ ಸಭಿಕರ ಕರತಾಡನಕ್ಕೆ ಭಾಜನರಾದ ಅವರು, ಘಟಿಕೋತ್ಸವ ಕೇವಲ ಔಪಚಾರಿಕ ವಲ್ಲ. ಜೀವನ ಸಾರ್ಥಕ ಮಾಡಿ ಕೊಳ್ಳಲು ಕಲಿಕೆ ಎಲ್ಲರಿಗೂ ಮುಖ್ಯ. ಕೇವಲ eನಕ್ಕಾಗಿ ವಿದ್ಯೆಯನ್ನು ಕಲಿಯುವುದಲ್ಲ, ವೈಯುಕ್ತಿಕ ವಿಕಾಸಕ್ಕೆ ಪ್ರೇರಣೆ ನೀಡುವ ಮಾಧ್ಯಮ ವಾಗಬೇಕು ಎಂದು ಆಶಿಸಿದರು.
ಜೀವನ ಸವಾಲಿನಿಂದ ಕೂಡಿದೆ. ಇದನ್ನು ಅವಕಾಶವನ್ನಾಗಿ ಮಾರ್ಪಡಿಸಿ ಕೊಂಡು ಜೀವನದಲ್ಲಿ ಜಯಶಾಲಿ ಗಳಾಗ ಬೇಕು. ಕೇವಲ ಭವಿಷ್ಯ ರೂಪಿಸಿಕೊಳ್ಳಲು ಪದವಿಯಲ್ಲ. ಬದಲಾಗಿ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಕೃತಿ ಸಮಾಜದಲ್ಲಿ ಸಂವೇದನಶೀಲರಾಗಿ ಬಾಳಲು ವಿದ್ಯೆ ಅವಶ್ಯ. ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದ ಅವರು, ಕೇವಲ ಭವಿಷ್ಯ ರೂಪಿಸಿಕೊಳ್ಳಲು eನಾರ್ಜನೆಗೈಯ್ಯುವುದು ಸಾಧುವಲ್ಲ ಎಂದು ತಿಳಿಸಿದರು.


ವಿಶ್ವದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಅದಕ್ಕೆ ಪದವಿ ಪಡೆದ ವಿದ್ಯಾರ್ಥಿಗಳು ಗಣನೀಯ ಕೊಡುಗೆ ನೀಡಬೇಕು. ಪಾಲಕರಿಗೆ ವಿದ್ಯೆ ಕಲಿಸಿದ ಗುರುಗಳಿಗೆ ವಿಶ್ವವಿದ್ಯಾಲಯಗಳಿಗೆ ಗೌರವ ನೀಡ ಬೇಕು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಘಟಿಕೋತ್ಸವದಲ್ಲಿ ೬೮೭೨ ಪುರುಷರು ಹಾಗೂ ೧೨೦೧೩ ಮಹಿಳೆಯರು ಸೇರಿ ಒಟ್ಟು ೧೮೮೮೫ ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ೧೪೬ ಸ್ವರ್ಣ ಪದಕಗಳಿದ್ದು, ಇವುಗಳಲ್ಲಿ ೧೩ ಪುರುಷರು ಹಾಗೂ ೭೧ ಮಹಿಳೆ ಯರು ಸೇರಿ ಒಟ್ಟು ೮೪ ವಿದ್ಯಾರ್ಥಿ ಗಳು ಹಂಚಿಕೊಂಡಿಡರು. ಪಿಹೆಚ್‌ಡಿ ಪದವಿ ಯನ್ನು ೧೧೫ ಪುರುಷರು ಹಾಗೂ ೮೯ ಮಹಿಳೆಯರು ಪಡೆದರು.
ಕಲಾ ನಿಕಾಯದ ಎಂ.ಎ ವಿದ್ಯಾರ್ಥಿ ವಸಂತ್ ಕುಮಾರ್ ಒಟ್ಟು ೧೦ ಹಾಗೂ ಒಂದು ನಗದು ಬಹುಮಾನ ಪಡೆಯುವ ಮೂಲಕ ಘಟಿಕೋತ್ಸವದ ಅತೀ ಹೆಚ್ಚು ಪದಕ ಪಡೆದರೆ, ಆನಂತರದ ಸ್ಥಾನದಲ್ಲಿ ಎಂಎಸ್ಸಿ ( ಪರಿಸರ ವಿeನ)ಯಲ್ಲಿ ಸಾನಿಯಾ ಪಿರ್ದೋಸ್ ಇದ್ದು, ಅವರಿಗೆ ೬ ಪದಕ ಪಡೆದಿzರೆ. ಮೂರನೇ ಸ್ಥಾನ ದಲ್ಲಿ ಎಂಎ ಸಮಾಜಶಾಸ್ತ್ರ್ತ ವಿಭಾಗದ ರಕ್ಷಿತಾ ಎ.ಎಸ್., ಎಂಬಿಎ ವ್ಯವಹಾರ ನಿರ್ವ ಹಣಾ ಅಧ್ಯಯನ ವಿಭಾಗದ ರಕ್ಷೀತ್ ಎಸ್., ಎಂಎಸ್ಸಿ ಜೈವಿಕ ತಂತ್ರ eನ ವಿಭಾಗದ ಶುಭಶ್ರೀ ಎಸ್., ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಹರ್ಷಿತಾ ಜಿ., ಅವರು ತಲಾ ೫ ಪದಕ ಮುಡಿಗೇರಿಸಿಕೊಂಡರು.
ಹಿರಿಯ ಮುತ್ಸದ್ದಿ ಹಾಗೂ ವಿಧಾನ ಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಂಬೈನ ವಿeನಿ ಸಿ.ಎಸ್. ಉನ್ನಿಕೃಷ್ಣನ್ ಮತ್ತು ಭದ್ರಾವತಿಯ ಯೋಗ ಗುರು ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ಕಲಾ ನಿಕಾಯದಲ್ಲಿ ೩೯ ಪುರುಷರು, ೨೫ ಮಹಿಳೆಯರು ಸೇರಿ ಒಟ್ಟು ೬೪ ವಿದ್ಯಾರ್ಥಿಗಳು, ವಾಣಿಜ್ಯದಲ್ಲಿ ೧೦ ಪುರುಷರು, ೮ ಮಹಿಳೆ ಯರು ಸೇರಿ ೧೮ ವಿದ್ಯಾ ರ್ಥಿಗಳು, ಶಿಕ್ಞಣ ನಿಕಾಯದಲ್ಲಿ ೧೪ ಪುರುಷರು, ೪ ಮಹಿಳೆಯರು ಸೇರಿ ಒಟ್ಟು ೧೮ ವಿದ್ಯಾರ್ಥಿಗಳು ಹಾಗೂ ವಿeನ ನಿಕಾಯದಲ್ಲಿ ೫೨ ಪುರುಷರು, ೫೨ ಮಹಿಳೆಯರು ಸೇರಿ ೧೦೪ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದರು.
ವಿವಿ ಕುಲಪತಿ ಪ್ರೊ| ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್. ಮಂಜುನಾಥ್, ಮಲ್ಯಾಮಾಪನ ಕುಲಸಚಿವ ಪ್ರೊ| ಗೋಪಿನಾಥ್ ಎಸ್.ಎಂ., ವಿವಿಧ ನಿಕಾಯದ ಡೀನರ್, ವಿಭಾಗಗಳ ಮುಖ್ಯಸ್ಥರು, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪ, ಕೇರಳದ ಡಾ.ಉನ್ನಿಕೃಷ್ಣನ್, ಭದ್ರಾವತಿಯ ಖ್ಯಾತ ಯೋಗಪಟು ಡಿ.ನಾಗರಾಜ್ ಉಪಸ್ಥಿತರಿದ್ದರು.