130 ಹಳ್ಳಿಗಳಿಂದ 270 ಕಿ.ಮೀ. ಯಶಸ್ವಿ ಪಾದಯಾತ್ರೆ ಮುಗಿಸಿದ ವಿನಯ ನಡೆ ಹಳ್ಳಿ ಕಡೆ ಪಾದಯಾತ್ರೆ….

ಹೊನ್ನಾಳಿ: ತಾಲ್ಲೂಕಿನ ಗಡಿ ಭಾಗವಾದ ಕೋಣನತಲೆ ಗ್ರಾಮ ದಿಂದ ಜ.೨ರ ಮಂಗಳವಾರದಿಂದ ಆರಂಭವಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾದ ಜಿ.ಬಿ. ವಿನಯ್ ಕುಮಾರ್ ಅವರ ಪಾದಯಾತ್ರೆ ಯು ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಸುಮಾರು ೪೫ ಹಳ್ಳಿಗಳ ಪಾದಯಾತ್ರೆಯು ಸಾಸ್ವೆಹಳ್ಳಿ- ಕುಳಗಟ್ಟೆ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ಮತ್ತು ಬಹಿರಂಗ ಸಭೆಗಳ ಮುಖಾಂತರ ಮುಕ್ತಾಯಗೊಂಡಿತು.
ಒಟ್ಟು ೫ ತಾಲ್ಲೂಕುಗಳ ೧೩೦ ಹಳ್ಳಿಗಳಿಂದ ೩೭೦ ಕಿ.ಮೀ. ಪಾದ ಯಾತ್ರೆ ಪೂರ್ಣಗೊಂಡು ೬ನೇ ತಾಲ್ಲೂಕು ಚನ್ನಗಿರಿ ಕಡೆಗೆ ಪ್ರಯಾಣ ಮುಂದುವರೆಸಿzರೆ.
ಈ ಪಾದಯಾತ್ರೆಯುದ್ದಕ್ಕೂ ಆಯಾ ಗ್ರಾಮಗಳ ಮುಖಂಡರು ಗಳು, ಯುವಕರು, ವಯೋ ವೃದ್ಧರು, ಕಾಂಗ್ರೆಸ್ ಕಾರ್ಯ ಕರ್ತರುಗಳು ಪಾದಯಾತ್ರೆಗೆ ಸಾಥ್ ನೀಡಿದರು.
ಜಿ.ಬಿ.ವಿನಯ್ ಕುಮಾರ್ ಅವರು ಪಾದಯಾತ್ರೆ ಹೋದ ಗ್ರಾಮಗಳ ಯುವಕರೊಂದಿಗೆ ಸಂವಾದ, ಶಾಲಾ-ಕಾಲೇಜುಗಳ ಭೇಟಿ, ಕೆಲವು ಹಳ್ಳಿಗಳಲ್ಲಿ ಗ್ರಾಮ ಗಳ ಯುವಕರೊಂದಿಗೆ ಕ್ರಿಕೆಟ್, ವಾಲಿಬಾಲ್ ಮತ್ತು ಗ್ರಾಮೀಣ ಕ್ರೀಡೆಗಳನ್ನು ಆಡಿದರು. ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳು, ಆಡಳಿತ ವಿರೋಧಿ ನೀತಿಗಳ ಬಗ್ಗೆ, ತಮ್ಮ ಮುಂದಿನ ಗುರಿಗಳು- ಧ್ಯೇಯೋದ್ದೇಶಗಳ ಕುರಿತಂತೆ, ತಮ್ಮ ಸಾಧನೆಗಳ ಬಗ್ಗೆ ತೆರೆದ ವಾಹನದಲ್ಲಿ ಎಲ್.ಇ.ಡಿ. ಪರದೆ ಯ ಮೂಲಕ ಪ್ರಚಾರ ಮಾಡು ವುದರ ಮೂಲಕ ಯಾತ್ರೆಯು ಸಾಗಿತ್ತು. ಯಾತ್ರೆಗೆ ಹಲಗೆಯ ತಂಡ ಮೆರಗು ನೀಡುತ್ತಿತ್ತು. ಆಯಾ ಗ್ರಾಮಗಳಲ್ಲಿ ಹೊಸ ವರ್ಷದ ಕ್ಯಾಲೆಂಡರ್‌ನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡುತ್ತಿದ್ದರು.
ಕುಳಗಟ್ಟೆ ಗ್ರಾಮದಲ್ಲಿ ಭರ್ಜರಿ ಜನಸಮೂಹವು ವಿನಯ್ ಕುಮಾರ್ ಮತ್ತು ತಂಡದವರನ್ನು ಸ್ವಾಗತಿಸಿದರು. ಗ್ರಾಮದ ಆಂಜ ನೇಯ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಜಿ.ಬಿ.ವಿನಯ್ ಕುಮಾರ್ ಮಾತ ನಾಡಿ ಸತತ ಪ್ರಯತ್ನ, ಪ್ರಾಮಾ ಣಿಕತೆ ಮತ್ತು ಒಳ್ಳೆಯ ಉದ್ದೇಶ ದೊ ಂದಿಗೆ ಕೆಲಸ ಮಾಡಿದರೆ ದೇವರು ಹಾಗೂ ಜನತೆ ಆರ್ಶೀವಾದ ಮಾಡುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.ಮಾಜಿ ಜಿಪಂ ಸದಸ್ಯ ಎ. ಆರ್.ಚಂದ್ರಶೇಖರ್ ಮಾತನಾಡಿ ಈ ಪಾದಯಾತ್ರೆಯ ರೂವಾರಿ ಯಾದ ವಿನಯ್ ಅವರ ಲೋಕ ಸಭಾ ಅಭ್ಯರ್ಥಿಗಳ ಮಾದರಿ ಮತ್ತು ವಿನೂತನ ಕಾರ್ಯ ಕ್ರಮ ವಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಎಂ.ಆರ್. ಹನು ಮಂತಪ್ಪ, ಎ.ಪಿ.ಹಾಲೇಶಪ್ಪ, ಬಸ ವರಾಜಯ್ಯ, ಮುಖಂಡರುಗಳಾದ ಬಿ.ಸಿದ್ದಪ್ಪ, ರಾಮಪ್ಪ, ಪರಮೇಶ್ವ ರಯ್ಯ, ರುದ್ರೇಗೌಡ, ಮಾದಪ್ಪ, ತಿಮ್ಮರಾಜು, ನಾಗರಾಜ, ಸಂಗಣ್ಣ, ಸಿದ್ದೇಶ್, ಶ್ರೀಧರ್ ಗೌಡ, ಹಿರೇ ಮಠ ಮುತ್ತು ,ಬಸವರಾಜ್, ವಿನೋದ್ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.