ಶಿವಮೊಗ್ಗ : ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜು, ರೆಡ್‌ಕ್ರಾಸ್ ಜಿ ಘಟಕ ಹಾಗೂ ನಂಜಪ್ಪ ಲೈಫ್‌ಕೇರ್ ಆಶ್ರಯದಲ್ಲಿ ಮಾ.೨೨ರ ನಾಳೆ ಬೆಳಿಗ್ಗೆ ೧೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ದೇಶೀಯ ವಿದ್ಯಾಶಾಲಾ ಸಮಿತಿಯ ಸಹಕಾರ್ಯದರ್ಶಿ ಡಾ. ಎ. ಸತೀಶ್‌ಕುಮಾರ್‌ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜಿಧಿಕಾರಿ ಗುರುದತ್ತ್ ಹೆಗಡೆ ಅವರು ಮಹಿಳಾ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಿವಿಎಸ್‌ನ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ವಹಿಸಲಿzರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಗುಂಜನ್ ಮಲ್ಹೋತ್ರ, ಖ್ಯಾತ ದತ್ತ ವೈದ್ಯರಾದ ಡಾ.ಶಶಿಕಲಾ ಹೊನ್ನಳ್ಳಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ನಂಜಪ್ಪ ಲೈಫ್ ಕೇರ್‌ನ ಕಾರ್ಯನಿರ್ವಹಣಾಧಿಕಾರಿ ಡಾ. ಡಿ.ಜಿ.ಅವಿನಾಶ್, ಜಿ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಡಾ.ಎಸ್. ದಿನೇಶ್, ನಿರ್ದೇಶಕಿ ಡಾ.ರೇಷ್ಮಾ, ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಖಜಂಚಿ ಬಿ.ಗೋಪಿನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಹೆಚ್.ಸಿ. ಯೋಗೀಶ್ ಆಗಮಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ. ದಿನೇಶ್, ಡಾ.ಎಂ. ವೆಂಕಟೇಶ್, ಹೆಚ್.ಸಿ. ಯೋಗೇಶ್, ಯಲ್ಲಪ್ಪ, ಡಾ.ಎಸ್. ದಿನೇಶ್ ಇನ್ನಿತರರು ಇದ್ದರು.
